"ಪಯಣ"
ಅಂದುಕೊಂಡಿದ್ದು ಸಾಧಿಸುವ ತನಕ......
Saturday, 9 May 2020
"ಜಾತಿ"
ಮಹೇಶನಿಗೆ ಈ ಜಾತಿಯ ಹುಚ್ಚು ಬಹಳ
ಅದೇನೋ ತಾನು ಆ ಜಾತಿಯಲ್ಲಿ ಹುಟ್ಟಿದ್ದೇ ನನ್ನ ಪೂರ್ವಜನ್ಮದ ಪುಣ್ಯದ ಫಲವೆಂಬಂತೆ ವರ್ತಿಸುತ್ತಿರುತ್ತಾನೆ.ತನ್ನ ಜಾತಿ ಬಿಟ್ಟು ಬೇರೆ ಜಾತಿಯವರೆಲ್ಲಾ ನಿಕೃಷ್ಟರು ಏನೋ ಪಾಪ ಮಾಡಿ ಆ ಜಾತಿಯಲ್ಲಿ ಜನಿಸಿದ್ದಾರೆ ಅಂತ ತಿಳಿದುಕೊಂಡಿದ್ದ.
ಮನೆಯಲ್ಲಿ ಅಪ್ಪ ಅಮ್ಮ ಈ ಜಾತಿಯ ಬಗ್ಗೆ ಮಾತನಾಡಬೇಡ ಜಾತಿಯ ಭೇದಭಾವ ಒಳ್ಳೆಯದಲ್ಲ ಪ್ರಪಂಚದಲ್ಲಿ ಎರಡೇ ಜಾತಿ ಅದು ಗಂಡು ಮತ್ತು ಹೆಣ್ಣು ಅಂತ ಹೇಳಿದ್ದರು ಅವನು ಅದನ್ನು ತೆಗೆದುಕೊಂಡರಲಿಲ್ಲ.ಯಾರು ಹೇಳಿದರು ಕೇಳದೆ ತನ್ನದೇ ಸರಿ ಅಂತ ಅಂದುಕೊಂಡಿದ್ದ.
ನಮ್ಮ ಜಾತಿ ಹಂಗೆ
ನಮ್ಮ ಜಾತಿ ಹಿಂಗೆ
ನಮ್ಮದು ಶ್ರೇಷ್ಠ ಜಾತಿ
ನಿಮ್ಮದು ಕನಿಷ್ಠ ಜಾತಿ ಎಂದೆಲ್ಲಾ ಉದ್ದುದ್ದವಾಗಿ ಹೇಳಿಕೊಂಡು ತಿರುಗಾಡುತ್ತಿರುತ್ತಿದ್ದ..
ಮನೆಯ ಮಹಡಿಯ ರೂಮಿನ ಕ್ಲಿನ್ ಮಾಡುವಾಗ ಅಜ್ಜನ ಡೈರಿ ಸಿಕ್ಕಿತು ಮಹೇಶನಿಗೆ.ತೆರೆದು ನೋಡಿದಾಗ ನನ್ನದೇ ಚಿಕ್ಕ ಮಗುವಿರುವಾಗ ತೆಗೆದ ಫೋಟೋ ಅದರ ಕೆಳಗೆ "ನನ್ನ ಮಗನಿಗೆ ಮಕ್ಕಳಾಗಲೇ ಇಲ್ಲ
ಕೊನೆಗೆ ಸಂಬಂಧಿಕರು ಮತ್ತು ತಮ್ಮದೇ ಜಾತಿಯ ಊರಿನವರ ವಿರೋಧ ಕಟ್ಟಿಕೊಂಡು ಅನಾಥಾಶ್ರಮದಲ್ಲಿ ಜಾತಿ ತಿಳಿಯದ ಮಗುವನ್ನು ದತ್ತು ತೆಗೆದುಕೊಂಡು ಬಂದಿದ್ದ ನನ್ನ ಮಗ.ಜಾತಿ ಇಲ್ಲದ ಈ ಮಗು ಜಾತಿ ಧರ್ಮವನ್ನು ಮೀರಿ ನಮ್ಮ ಮನೆಯ ಬೆಳಕಾಗಲಿ ಅಂತ ಬರೆದಿದ್ದರು..
ಅದನ್ನು ಓದಿದ ಮಹೇಶನಿಗೆ ತುಂಬಾ ನೋವಾಗಿತ್ತು.ಅವನ ಅರಿವಿಲ್ಲದಂತೆ ಅವನ ಕಣ್ಣುಗಳಲ್ಲಿ ನೀರಿತ್ತು.!!!!
ನಡೆವುದೊಂದೇ ಭೂಮಿ ಕುಡಿವುದೊಂದೇ ನೀರು
ಸುಡುವೊಡೆ ಕಿಚ್ಚು ಎರಡಿಲ್ಲ -ಜಗವೆಲ್ಲ
ಜಡೆಗೊಂಬುತಿದೆಕೋ ಸರ್ವಜ್ಞ !!
ಎಲ್ಲರೂ ವಾಸಿಸುವುದು ಒಂದೇ ಭೂಮಿಯ ಮೇಲೆ. ಎಲ್ಲರೂ ಕುಡಿಯುವ ನೀರು ಒಂದೇ. ಸುಡುವ ಬೆಂಕಿಯು ಎರಡಿಲ್ಲ . ಹಾಗಾದ ಮೇಲೆ ಆ ಜಾತಿ ಈ ಜಾತಿ ಎಂಬ ಭೇಧವೇಕೆ?
ಎನ್.ಆರ್.ಕೆ. ನೇರಳಕಟ್ಟೆ.
Wednesday, 11 March 2020
" ಮೆಟ್ರೋ ಹುಡುಗಿ"
OLX ನಲ್ಲಿ ಎಸ್.ಎಲ್.ಭೈರಪ್ಪನವರ 8 ಪುಸ್ತಕಗಳನ್ನು 50% ದರದಲ್ಲಿ ಕೊಡುತ್ತಾರೆ ಅಂತ ಕೊಟ್ಟಿದ್ದ ಪೋಸ್ಟ್ ನೋಡಿ ಆ ನಂಬರಿಗೆ ಫೋನ್ ಮಾಡಿ ಮಾತನಾಡಿದ ಮೇಲೆ ಅವರು CMH ರಸ್ತೆಯಲ್ಲಿ ರುವ ಕರ್ನಾಟಕ ಬ್ಯಾಂಕ್ ಎದುರುಗಡೆ ಇರುವ ಪಾರ್ಕ್ ಹತ್ತಿರ ಬರುವುದಕ್ಕೆ ಹೇಳಿದ್ದರು ಮೊಬೈಲ್ ನಲ್ಲಿ ಹಾಡು ಕೇಳುತ್ತಾ ಅಲ್ಲೇ ಕಾಯುತ್ತಿದ್ದೆ.ಕಾಯುವ ಕೆಲಸ ಯಾರಿಗೂ ಬೇಡ ಭೈರಪ್ಪ ನವರ ಪುಸ್ತಕ ಅನ್ನೋ ಒಂದೇ ಕಾರಣಕ್ಕೆ ಅವರನ್ನು ಕಾಯುತ್ತಿದ್ದೆ.
"ಆಕಾಶದಿಂದ ಧರೆಗಿಳಿದ ರಂಭೆ,
ಇವಳೇ ಇವಳೇ
ಚಂದನದ ಗೊಂಬೆ,
ಇವಳೇ ಇವಳೇ ಚಂದನದಗೊಂಬೆ ,
ಚೆಲುವಾದ ಗೊಂಬೆ,
ಚಂದನದ ಗೊಂಬೆ"
ಈ ಹಾಡು ಬರುವಾಗಲೇ ರಸ್ತೆಯಲ್ಲಿ ಬರುತ್ತಿದ್ದ ಬಿಳಿ ಚೂಡಿಧಾರ್ ಹುಡುಗಿಯನ್ನು ನೋಡಿದ್ದು🤣🤣🤣
(ಚಂದ ಗ್ವಾಂಪಿ ಚಂದ್ ಮುಡಿ ಇತ್ ಹೆಣ್ಣ್🙈)(ನನ್ನ ಕಂಡಗೆ ಬಿಲ್ಲಾಸ್ ಬಿಟ್ಟರಿಗೆ ಎಲ್ಲಾ ಹುಡುಗಿಯರು ಚಂದ ಕಾಣಿಸುತ್ತಾರೆ ಕಣ್ಣಿನ ಸಮಸ್ಯೆ ಅಥವಾ ವಯಸ್ಸಿನ ಸಮಸ್ಯೆಯೋ ಗೊತ್ತಿಲ್ಲ😜😜) ನಗುತ್ತಾ ಮೊಬೈಲ್ನಲ್ಲಿ ಮಾತನಾಡುತ್ತ ನಡೆದುಕೊಂಡು ಬರುತ್ತಿದ್ದಳು ಪ್ರಪಂಚವನ್ನೇ ಮರೆತವಳ ಹಾಗೇ.ಹೆಣ್ಣುಮಕ್ಕಳು ನಕ್ಕರೆ ಚಂದ ಯಾವಾಗಲೂ😍.ಆದರೆ ಅವಳ ಆ ನಗು ಜಾಸ್ತಿ ಸಮಯ ಇರಲಿಲ್ಲ..
ಅವಳ ಹಿಂದೆ ನಡೆದು ಬರುತ್ತಿದ್ದ ಒಬ್ಬನು ನೋಡುವುದಕ್ಕೆ ಪಕ್ಕಾ ಕಳ್ಳನ ತರಹ ಇದ್ದಾನೆ.ಇನ್ನೊಬ್ಬ ಅವಳ ಪಕ್ಕದಲ್ಲಿ ರಸ್ತೆಯಲ್ಲಿ ಬೈಕ್ನಲ್ಲಿ ನಿಧಾನವಾಗಿ ಅವಳನ್ನೇ ನೋಡುತ್ತಾ ಹೋಗುತ್ತಿದ್ದ. ಬೈಕ್ ನಲ್ಲಿರುವವನನ್ನು ನೋಡಿ ಅವಳು ಸ್ವಲ್ಪ ಭಯಗೊಂಡು ಸ್ವಲ್ಪ ರಸ್ತೆಯ ಪಕ್ಕಕ್ಕೆ ಸರಿದಳು ಆದರೆ ಅವಳು ಹಿಂದೆ ನೋಡಿರಲಿಲ್ಲ ಬರುತ್ತಿರುವವ ಇನ್ನೊಬ್ಬನನ್ನು.ಮನಸ್ಸು ಯಾವುದೋ ಕೇಡನ್ನು ಶಂಕಿಸಿತು.ಏನೋ ಕೆಟ್ಟದ್ದು ನಡೆಯಲಿದೆ ಅಂತ ಅಂದುಕೊಳ್ಳುತ್ತಿದ್ದೆ ನಾನು.
ಅಷ್ಟರಲ್ಲಿ KFC ಸರ್ಕಲ್ ಸಿಗ್ನಲ್ ಬಿಟ್ಟಿತು ತಕ್ಷಣ ಹಿಂದಿರುವವನು ಸಡನ್ನಾಗಿ ಮಾತನಾಡುತ್ತ ಹೋಗುತ್ತಿದ್ದ ಅವಳ ಕೈಯಿಂದ ಮೊಬೈಲ್ ಕಿತ್ತುಕೊಂಡು ಪಕ್ಕದಲ್ಲಿರುವ ಬೈಕ್ ನಲ್ಲಿ ಕುಳಿತುಕೊಂಡು ಪರಾರಿ ಆಗಿದ್ದರು ಇಬ್ಬರೂ ಕ್ಷಣ ಮಾತ್ರದಲ್ಲಿ.ಎಷ್ಟು ಚಾಲಾಕಿ ಕಳ್ಳರು ಹಾಡು ಹಗಲಿನಲ್ಲೇ ಏನು ಭಯವಿಲ್ಲದೆ ಮೊಬೈಲ್ ಕಳ್ಳತನ ಮಾಡಿಕೊಂಡು ಹೋಗಿದ್ದರು ನನ್ನ ಕಣ್ಣೆದುರೇ.ನಾನು ಏನು ಸಹಾಯ ಮಾಡುವುದಕ್ಕೆ ಆಗದೇ ಅಸಹಾಯಕನಾಗಿ ನಿಂತಿದ್ದೆ.
ಐದು ನಿಮಿಷಗಳ ಹಿಂದೆ ಪ್ರಪಂಚ ಮರೆತು ಫೋನಿನಲ್ಲಿ ಮಾತನಾಡುತ್ತಿದ್ದಳು ಈಗ ಪ್ರಪಂಚವನ್ನು ತನ್ನ ತಲೆಮೇಲೆ ಹೊತ್ತುಕೊಂಡವಳ ತರ ಕಾಣುತ್ತಿದ್ದಳು.ಕಣ್ಣುಮುಚ್ಚಿ ತೆಗೆಯುವುದರಲ್ಲಿ ಅವಳ ನಗು ಮುಖ ಮರೆಯಾಗಿ ದುಃಖದ ಮುಖ ಕಾಣುತ್ತಿತ್ತು ಕಣ್ಣಿನಲ್ಲಿ ನೀರು ಧಾರಾಕಾರವಾಗಿ ಸುರಿಯುತ್ತಿತ್ತು.ಅವಳನ್ನು ಮಾತನಾಡಿಸುವುದಾ ಬೇಡ್ವಾ ಅನ್ನೋ ಗೊಂದಲದಲ್ಲಿದ್ದೆ.ಆಮೇಲೆ ಧೈರ್ಯ ಮಾಡಿಕೊಂಡು ಹತ್ತಿರ ಹೋಗಿ "ಹಲೋ ಪ್ಲೀಸ್ ಅಳಬೇಡಿ ಮೊಬೈಲ್ ಹೋಗಿದ್ದು ನಾನು ನೋಡಿದೆ ಯಾರಿಗಾದರೂ ಫೋನ್ ಮಾಡಬೇಕಾ ಅಥವಾ ಏನಾದರೂ ಸಹಾಯ ಬೇಕಾ ಅಂತ ಕೇಳಿದೆ. ಅವಳು ಕಣ್ಣೀರು ಒರೆಸಿಕೊಳ್ಳುತ್ತ ನನ್ನ ಅಣ್ಣನಿಗೆ ಒಂದ್ ಫೋನ್ ಮಾಡಬೇಕು ಅಂತ ಹೇಳಿ ನನ್ನ ಮೊಬೈಲ್ ತಗೊಂಡು ಅಣ್ಣನಿಗೆ ಫೋನ್ ಮಾಡಿದಳು
ಅಣ್ಣ ರಿಸೀವ್ ಮಾಡಿದ ತಕ್ಷಣ ಮತ್ತು ಜೋರಾಗಿ ಅತ್ತು "ನನ್ನ ಫೋನ್ ಕದ್ದುಕೊಂಡ ಹೋದರು" ಅಂದಳು ಅದಕ್ಕೆ ಅಣ್ಣ "ಮೊಬೈಲ್ ಹೋದರೆ ಹೋಗಲಿ ನೀನು ಅಳಬೇಡ ಮನೆಗೆ ಬರುವುದಕ್ಕೆ ದುಡ್ಡು ಇದಿಯಾ ಅಂತ ಕೇಳಿದಾಗ ಇಲ್ಲ ದುಡ್ಡಿಲ್ಲ ಮೊಬೈಲ್ ಜೊತೆಗೆ ಮೆಟ್ರೋ ಕಾರ್ಡು ಸಹ ಹೋಗಿದೆ ಅಂದಳು ಅಳುತ್ತಾ. ಫೋನ್ ನನಗೆ ಕೊಡುವುದಕ್ಕೆ ಹೇಳಿದರು ಅವಳ ಅಣ್ಣ.
"ಹಲೋ ಸರ್ ಅವಳು ನನ್ನ ತಂಗಿ ಅವಳ ಮೊಬೈಲ್ ಹೋಗಿದೇ ಅಂತೆ ಪ್ಲೀಸ್ ಅವಳನ್ನು ವಿಜಯನಗರಕ್ಕೆ ಹೋಗುವ ಮೆಟ್ರೊ ರೈಲಿನಲ್ಲಿ ಕಳುಹಿಸಿಕೊಡಿ ನಿಮಗೆ ಗೂಗಲ್ ಪೇ ಮಾಡುತ್ತೇನೆ ಪ್ಲೀಸ್ ಇದೊಂದು ಸಹಾಯ ಮಾಡಿ ಮೊಬೈಲ್ ಹೋದ ಟೆನ್ಶನ್ ನಲ್ಲಿ ಅವಳು ಮನೆಗೆ ಬಂದಿಲ್ಲ ಅಂದರೆ ಕಷ್ಟ" ಅಂದರು. ತುಂಬಾ ಭಯಗೊಂಡಿದ್ದರು ಅವರ ಸ್ವರದಲ್ಲೇ ಗೊತ್ತಾಗುತ್ತಿತ್ತು ನಾನು "ಆಯ್ತು ಸರ್ ಭಯಪಡಬೇಡಿ ನಾನೇ ಅವರನ್ನು ಮೆಟ್ರೋದಲ್ಲಿ ಕಳುಹಿಸುತ್ತೇನೆ ಗೂಗಲ್ ಪೇ ಏನು ಮಾಡುವುದು ಬೇಡ" ಅಂತ ಹೇಳಿದೆ ಧನ್ಯವಾದಗಳು ನಿಮ್ಮಿಂದ ತುಂಬಾ ಉಪಕಾರವಾಯಿತು ಸರ್ ಅಂತ ಹೇಳಿ ತಂಗಿಗೆ ಫೋನ್ ಕೊಡುವುದಕ್ಕೆ ಹೇಳಿದರು..
"ಏನು ಟೆನ್ಶನ್ ಮಾಡ್ಕೋಬೇಡ ನಾಳೆ ಹೋಗಿ ಕಂಪ್ಲೇಂಟ್ ಮಾಡೋಣ ಈಗ ಸೀದಾ ಮನೆಗೆ ಬಾ ಅಂತ ಹೇಳಿದರು" ಅವಳು ಆಯ್ತು ಅಂತ ಹೇಳಿ ಫೋನ್ ನನಗೆ ಕೊಟ್ಟಳು.ನಾನು ಬನ್ನಿ ಮೆಟ್ರೋ ಸ್ಟೇಶನ್ ಗೆ ಹೋಗೋಣ ಅಂತ ಹೇಳಿದಾಗಲೂ ಕಣ್ಣೀರು ಹಾಕುತ್ತಿದ್ದಳು..
ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ ಅವಳಿಗೆ ವಿಜಯನಗರಕ್ಕೆ ಹೋಗುವ ಮೆಟ್ರೋ ಟೋಕನ್ ತೆಗೆದುಕೊಟ್ಟೆ ಅವಾಗ ಮಾತನಾಡಿದಳು ತುಂಬಾ ಥ್ಯಾಂಕ್ಸ್ ನಿಮಗೆ ಅಂದಳು.ಮನಸ್ಸಿಗೆ ಚೂರು ಖುಷಿ ಆಯಿತು ಅವಳು ಮಾತನಾಡಿದ್ದಕ್ಕೆ😜😜😜.
ಮೊಬೈಲ್ ನಲ್ಲಿ "ಮಹತ್ವವಾದ ಡಾಕ್ಯುಮೆಂಟ,ಬ್ಯಾಂಕ್ ಮಾಹಿತಿ ಏನಾದರೂ ಇತ್ತಾ ಅವಾಗಿಂದ ಅಳುತ್ತಿದ್ದೀರಿ ಅದಕ್ಕೆ ಕೇಳಿದೆ ತಪ್ಪು ತಿಳಿದುಕೊಳ್ಳಬೇಡಿ" ಅಂದೇ ಅದಕ್ಕವಳು "ಅದು ಯಾವುದು ಇಲ್ಲ ಮೊನ್ನೆ ಲಾಲಬಾಗ್ ನಲ್ಲಿ ಮಾಡಿದ ಫೋಟೋ ಶೂಟ್ ಫೋಟೋಸ್ ಮತ್ತೆ ನನ್ನ ನನ್ನ ಕಸಿನ್ ಮದುವೆಯಲ್ಲಿ ತೆಗೆದ ಸೆಲ್ಫೀ ಫೋಟೋಸ್ ಇತ್ತು ಅದಿಷ್ಟು ಫೋಟೋಸ್ ಗೂಗಲ್ ಡ್ರೈವ್ ಗೆ ಅಪ್ಲೋಡ್ ಮಾಡಿರಲಿಲ್ಲ. ಅವೆಲ್ಲಾ ಫೋಟೋ ಹೋಗಿದ್ದಕೆ ಬೇಜಾರು ಅಷ್ಟೇ ಮೊಬೈಲ್ ಹೋಗಿದ್ದಕ್ಕೆ ಅಲ್ಲ "ಅಂದಳು. ಅವಳ ಆ ಮಾತಿಗೆ ಅಳಬೇಕಾ ನಗಬೇಕೋ ಅಂತ ಗೊತ್ತಾಗಲಿಲ್ಲ ಒಂದು ಕ್ಷಣ.(ಮನಸ್ಸಿನಲ್ಲಿ ಈ ಹುಡುಗಿಯರನ್ನು ಅರ್ಥ ಮಾಡಿಕೊಳ್ಳುದು ದೇವರಿಗೆ ಸಹಾ ಆಗೊಲ್ಲ ಅಂತ ಕಾಣುತ್ತೆ😂😂😂) ಫೋಟೋಸ್ ಗಾಗಿ ಇಷ್ಟೋತ್ತು ಅಳುತ್ತಿದ್ದಳು ಅಂದಾಗ ಮೆಟ್ರೋ ಸ್ಟೇಷನ್ ಮೇಲಿಂದ ಕೆಳಗಡೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಅನಿಸಿಬಿಡ್ತು ನನಗೆ ಒಂದು ಸಲ😂😂😂😂..
ಲೇಟ್ ಆಯ್ತು ನೀವು ಜಾಗ್ರತೆ ಆಗಿ ಮನೆಗೆ ಹೋಗಿ ಮನೆಯಲ್ಲಿ ಅಣ್ಣ ಕಾಯುತ್ತಿದ್ದಾರೆ ಅಂತ ಹೇಳಿದಾಗ ಹಾ ಸರಿ ತುಂಬಾ ಥ್ಯಾಂಕ್ಸ್ ಸರ್ ಸಹಾಯ ಮಾಡಿದ್ದಕ್ಕೆ ಅಂತ ಹೇಳಿ ಹೋದಳು.ಅವಳ ಅಣ್ಣನಿಗೆ ಫೋನ್ ಮಾಡಿ ಹೇಳಿದೆ ನಿಮ್ಮ ತಂಗಿ ಮೆಟ್ರೋ ರೈಲ್ ಹತ್ತಿದ್ದಾಳೆ ಅಂತ ಅವರು ತುಂಬಾ ಖುಷಿಗೊಂಡು ಮತ್ತೆ ಮತ್ತೆ ಧನ್ಯವಾದಗಳು ಹೇಳಿದರು.ಹುಡುಗಿಗೆ ಸಹಾಯ ಮಾಡಿದೇ ಅನ್ನೋ ಖುಷಿ ಒಂದೆಡೆಯಾದರೆ ಭೈರಪ್ಪನವರ 8 ಪುಸ್ತಕ ಸಿಕ್ಕಿದಕ್ಕೆ ಜಾಸ್ತಿ ಖುಷಿ ಆಗಿತ್ತು.ಪುಸ್ತಕ ತೆಗೆದುಕೊಂಡು ಮನೆಗೆ ಬಂದಾಗ ಅವಳ ಅಣ್ಣ ಫೋನ್ ಮಾಡಿ ತಂಗಿ ಮನೆಗೆ ಬಂದಿದ್ದಾಳೆ ಅಂತ ಹೇಳಿದರು.
ಘಟನೆ ನಡೆದು ಸರಿಯಾಗಿ 10 ದಿನಕ್ಕೆ ನನ್ನ ಮೊಬೈಲ್ ಗೆ ಹೊಸ ನಂಬರಿನಿಂದ ವಾಟ್ಸಾಪ್ ಸಂದೇಶ ಬಂದಿತ್ತು.ಮೊಬೈಲ್ ನೋಡಿದೆ ಅದರಲ್ಲಿ
"ಹಾಯ್ ನಾನು
ಮೆಟ್ರೋ ಹುಡುಗಿ ಸ್ಮಿತಾ😍 ... ಅಂತಿತ್ತು. ಆ
ಸಂದೇಶ ನೋಡಿದಾಗ ಮನಸ್ಸಿನ ಮೂಲೆಯಲ್ಲಿ
"ಹೃದಯದಲ್ಲಿ ಇದೇನಿದು
ನದಿಯೊಂದು ಓಡಿದೆ..
ಹೃದಯದಲ್ಲಿ ಇದೇನಿದು
ನದಿಯೊಂದು ಓಡಿದೆ..
ಕಲಕಲನೆ ಕಲರವ ಕೇಳಿ
ಹೊಸಬಯಕೆಯ ಹೂವು ಅರಳಿ..
ಜೊತೆಯಲ್ಲಿ ಪ್ರೇಮ ಗೀತೆಹಾಡುವಾಸೆ ಈಗ...."
ಈ ಹಾಡು ಕೇಳುತ್ತಿತ್ತು🙈.
✍️ಎನ್.ಆರ್.ಕೆ.ನೇರಳಕಟ್ಟೆ.
" ಹಿಂದೂ ಮುಸ್ಲಿಂ"
ಶಿವಮೊಗ್ಗದಲ್ಲಿ ನಮ್ಮ ಗೆಳತಿ ಸೃಷ್ಟಿಯ ಮದುವೆ ಮುಗಿಸಿ ನಾವು 6 ಜನ ಗೆಳೆಯರು ಬೈಕ್ ನಲ್ಲಿ ಆಗುಂಬೆಯ ಸೂರ್ಯಾಸ್ತದ ಸುಂದರವಾದ ದೃಶ್ಯ ವನ್ನು ನೋಡಿ ಪ್ರಕೃತಿಯ ಸೌಂದರ್ಯವನ್ನು ಆರಾಧಿಸುತ್ತಾ ಘಾಟಿಯಿಂದ ಕೆಳಗೆ ಹೋಗುತ್ತಿದ್ದೆವು.
ಆಗುಂಬೆಯ ಕಡಿದಾದ ತಿರುವಿನಲ್ಲಿ ಹೋಗುವುದೇ ಒಂಥರಾ ರೋಮಾಂಚನಕಾರಿ ಅನುಭವ ಹಾಗೂ ಅಪಾಯಕಾರಿ ಕೂಡ.
ಕೆಳಗೆ ಬರುವ ದಾರಿಯ ಒಂದು ತಿರುವಿನಲ್ಲಿ ಬೈಕ್ ನಿಲ್ಲಿಸಿಕೊಂಡು ಮುಸ್ಲಿಂ ದಂಪತಿಗಳು ನಿಂತಿದ್ದರು ಚಿಕ್ಕ ಮಗು ಕೂಡ ಜೊತೆಗಿತ್ತು.ನಮ್ಮನ್ನು ನೋಡಿದ ತಕ್ಷಣ ಸ್ವಲ್ಪ ಭಯಗೊಂಡರು(ನಾವೆಲ್ಲರೂ ಗಡ್ಡಬಿಟ್ಟುಕೊಂಡು ನೋಡುವುದಕ್ಕೆ ಸೇಮ್ ಕಳ್ಳರ ತರಹ ಇದ್ದೇವೆ)
ಮುಸ್ಲಿಂ ಮಹಿಳೆ ನಮ್ಮನ್ನು ನೋಡಿ ಮಗುವನ್ನು ಗಟ್ಟಿಯಾಗಿ ಹಿಡಿದುಕೊಂಡು ತಲೆ ಎತ್ತಲ್ಲಿಲ್ಲ.ಅವರು ಭಯಗೊಂಡಿರುವುದು ಗೊತ್ತಾಗಿತ್ತು ನಮಗೆ.
ನಾವೇ ನಮ್ಮ ಬೈಕ್ ಸ್ಲೋ(ನಿಧಾನವಾಗಿ) ಮಾಡಿ ಹತ್ತಿರ ಹೋದರು ಅವರು ನಮ್ಮನ್ನು ನೋಡಿ ಮಾತನಾಡಿಸಲಿಲ್ಲ ಸಹಾಯ ಬೇಕು ಅಂತ ಕೇಳಲಿಲ್ಲ.ಏನಾದರೂ ಸಹಾಯ ಬೇಕಿದ್ದರೆ ಅವರೇ ಮಾತನಾಡಿಸುತ್ತಿದ್ದರು ಅಂತ ಅಂದುಕೊಂಡು ನಾವು ಸಹ ಅವರನ್ನು ಮಾತನಾಡಿಸದೇ ಹೊರಟೆವು.
ತಿರುಗಿ ನೋಡಿದಾಗ ಅವರು ಬೈಕ್ ಸ್ಟಾರ್ಟ್ ಮಾಡುವುದಕ್ಕೆ ಒದ್ದಾಡುತ್ತಿದ್ದರು.ಆಗಲೇ ಕತ್ತಲಾಗುತ್ತ ಬಂದಿತ್ತು ಮಹಿಳೆ ಮತ್ತು ಮಗು ಜೊತೆಗಿದೆ ಇಂಥ ಸಮಯದಲ್ಲಿ ಬಿಟ್ಟು ಹೋಗುವುದು ಸರಿ ಅಲ್ಲ ಅಂತ ಮನಸ್ಸು ಹೇಳಿತು.ಸಹಾಯ ಮಾಡಿ ಅಂತ ಕೇಳಿದವರಿಗೆ ಮಾತ್ರ ಸಹಾಯ ಮಾಡೋದಲ್ಲ ಕಷ್ಟದಲ್ಲಿರುವವರಿಗೆ ಕೇಳದೆ ಸಹಾಯ ಮಾಡೋದೆ ಮನುಷ್ಯನ ನಿಜವಾದ ಕರ್ತವ್ಯ.ಅವರು ಬೈಯ್ದರು ಏನಾದರೂ ಅಂದರೂ ಪರವಾಗಿಲ್ಲ ಅಂತ ಅಂದುಕೊಂಡು ಬೈಕ್ ತಿರುಗಿಸಿ ಅವರ ಹತ್ತಿರ ಹೋಗಿ ನಿಲ್ಲಿಸಿ" ಅಣ್ಣಾ ಏನು ಪ್ರಾಬ್ಲಂ ಬೈಕ್ ನಲ್ಲಿ ಏನಾದರೂ ತೊಂದರೇನಾ" ಅಂತ ಕೇಳಿದಾಗ ಅವರ ಮುಖದಲ್ಲಿ ಸ್ವಲ್ಪ ಧೈರ್ಯ ಬಂದಿತ್ತು ನಾನು ಅಣ್ಣ ಅಂತ ಕರೆದಿದ್ದಕೆ. "ಹೌದು ಸರ್ ಬೈಕ್ ಸ್ಟಾರ್ಟ್ ಆಗುತ್ತಿಲ್ಲ ಮಗು ಹೆಂಡತಿ ಜೊತೆಗಿದ್ದಾಳೆ ಕತ್ತಲು ಬೇರೆ ಆಗಿದೆ ಆ ಭಯದಲ್ಲಿ ತಲೆ ಸರಿಯಾಗಿ ಕೆಲಸ ಮಾಡುತ್ತಿಲ್ಲ" ಅಂದರು. "ಇವನು ಗುರು ನನ್ನ ಗೆಳೆಯ ಬೈಕ್ ಮೆಕ್ಯಾನಿಕ್ ಅವನು ನಿಮ್ಮ ಬೈಕ್ ನೋಡುತ್ತಾನೆ ಈ ಕಡೆ ಬನ್ನಿ ಅಣ್ಣಾ"ಅಂದೆ.
ಗುರು ಬೈಕ್ ಹತ್ತಿರ ಹೋಗಿ ನೋಡುತ್ತಿದ್ದಾಗ ನಾನು ಅವರನ್ನು ಕೇಳಿದೆ " ನಾವು ಆವಾಗ ಬೈಕ್ ಸ್ಲೋ ಮಾಡಿದಾಗ ಸಹಾಯ ಬೇಕು ಅಂತ ಯಾಕೆ ಕೇಳಲಿಲ್ಲ ನೀವು".ಅದಕ್ಕೆ ಅವರು "ನಿಮ್ಮನ್ನು ನೋಡಿದರೆ ಹಿಂದೂ ಹುಡುಗರ ತರಹ ಇದ್ದೀರಿ ನಾವು ಮುಸ್ಲಿಮರು.ಸಹಾಯ ಕೇಳೋಕೆ ಏನಾದರೂ ತೊಂದರೆ ಮಾಡಿದರೆ ಅನ್ನೋ ಭಯದಲ್ಲಿ ನಿಮ್ಮನ್ನು ಮಾತನಾಡಿಸಲಿಲ್ಲ ಸರ್ ಅಂದರು.ನನಗೆ ಆಶ್ಚರ್ಯವಾಗಿತ್ತು ಅವರ ಆಲೋಚನೆಯನ್ನು ನೋಡಿ.ಆ ಕತ್ತಲೆಯಲ್ಲೂ ಕೇವಲ ಜಾತಿ ನೋಡಿ ನಮ್ಮನ್ನು ಸಹಾಯ ಕೇಳುವುದಕ್ಕೆ ಹಿಂದೆ ಮುಂದೆ ನೋಡಿದ್ದರು.
ನಮ್ಮವರೇ ನಮ್ಮವರ ಹತ್ತಿರ ಸಹಾಯ ಕೇಳೋದಿಕ್ಕೆ ಭಯ ಪಡುತ್ತಿದ್ದಾರೆ.ಈ ಜಾತಿ ಧರ್ಮಗಳು ನಮ್ಮ ನಡುವಿನ ಬಂಧುತ್ವ ಮತ್ತು ನೆಮ್ಮದಿಯನ್ನು ಕಸಿದುಕೊಂಡುಬಿಟ್ಟಿದೆ.
"ಅಣ್ಣಾ ನಂಬಿಕೆ ಭರವಸೆಗಳನ್ನು ಕಳೆದುಕೊಳ್ಳುವುದು ಕೈಕಾಲುಗಳನ್ನು
ಕಳೆದುಕೊಳ್ಳುವುದಕ್ಕಿಂತಲೂ ಕೆಟ್ಟದಾಗಿರುತ್ತದೆ.ಎಲ್ಲಾ ಹಿಂದೂಗಳು ಕೆಟ್ಟವರಲ್ಲ ಹಾಗೆಯೇ ಎಲ್ಲಾ ಮುಸ್ಲಿಮರು ಕೆಟ್ಟವರಲ್ಲ.ನಮ್ಮವರ ಮೇಲೆ ನಾವೇ ನಂಬಿಕೆ ಕಳೆದುಕೊಂಡಿದ್ದರಿಂದ ಕೆಲವು ರಾಜಕಾರಣಿಗಳು ಮತ್ತು ಕೆಲವು ನಮ್ಮ ನಿಮ್ಮ ಧಾರ್ಮಿಕ ನಾಯಕರು ಅದನ್ನು ಸರಿಯಾಗಿ ಬಳಸಿಕೊಂಡು ನಮ್ಮ ನಡುವೆ ಜಾತಿ ಧರ್ಮ ಅನ್ನೋ ವಿಷ ಬೀಜ ಬಿತ್ತಿ ಒಂದಾಗಲಾಗದಷ್ಟು ದೊಡ್ಡ ಕಂದಕ ಮಾಡಿದ್ದಾರೆ.ನಂಬಿಕೆ ಬಹುದೊಡ್ಡದು.ಜಾತಿ ಧರ್ಮವನ್ನು ಮರೆತು ನಾವೆಲ್ಲರೂ ಮೊದಲು ಮನುಷ್ಯರು ಅಂತ ತಿಳಿದಾಗಲೇ ಏನಾದರೂ ಬದಲಾವಣೆ ಸಾಧ್ಯ.
ಮೊದಲು ಹಿಂದುಗಳು ಸರಿಯಾಗಲಿ ಮುಸ್ಲಿಮರು ಸರಿಯಾಗಲಿ ಅನ್ನೋದು ಬಿಟ್ಟು ನಾವೇ ಮುಂದೆ ಹೋಗಿ ಜಾತಿಯನ್ನು ಮರೆತು ಎಲ್ಲರೂ ನಮ್ಮವರು ಅಂತ ನಂಬೋಣ.ಯಾರೋ ಬಂದು ನಮ್ಮ ನಡುವಿನ ಈ ಸಮಸ್ಯೆಯನ್ನು ತೆಗೆದುಹಾಕುತ್ತಾರೆ ಅನ್ನೋ ಆಸೆಯಲ್ಲಿ ಕಾಯುವ ಬದಲು ನಾವೇ ಒಂದು ಹೆಜ್ಜೆ ಮುಂದಡಿ ಇಡೋಣ ಬದಲಾವಣೆ ಕಡೆ.
ಬದಲಾವಣೆ ನಮ್ಮಿಂದಲೇ ಶುರುವಾಗಲಿ ಅಣ್ಣ."ಅಂದೇ
ನನ್ನ ಮಾತು ಕೇಳಿ ಗಂಡಹೆಂಡತಿ ಇಬ್ಬರೂ ಖುಷಿಗೊಂಡಿದ್ದರು.
ಹೌದು ನಿಮ್ಮ ಮಾತು ನೂರಕ್ಕೆ ನೂರರಷ್ಟು ನಿಜ ನಮ್ಮ ಸಮಸ್ಯೆ ಯನ್ನು ನಾವೇ ಬಗೆಹರಿಸಿಕೊಳ್ಳಬೇಕು.
ಆಯ್ತು ಇನ್ನುಮುಂದೆ ನಾನು ಹಿಂದೂ ಮುಸ್ಲಿಂ ಅಂತ ಜಾತಿಯ ಬಗ್ಗೆ ಯೋಚನೆ ಮಾಡುವುದಿಲ್ಲ ಭಯಪಡುವುದಿಲ್ಲ ನನ್ನ ಮಕ್ಕಳಿಗೂ ಈ ಜಾತಿಯ ಬಗ್ಗೆ ಹೇಳುವುದಿಲ್ಲ ಅಂದಾಗ ಖುಷಿ ಆಗಿತ್ತು ಮನಸ್ಸಿಗೆ. ಈ ಹಿಂದೆ ಭಯಗೊಂಡಿದ್ದ ಅವರ ಹೆಂಡತಿ ಏನು ಭಯವಿಲ್ಲದೆ ಖುಷಿಯಲ್ಲಿದ್ದರು.ಗುರು ಬೈಕ್ ರೆಡಿ ಮಾಡಿದ್ದ ಅಷ್ಟರಲ್ಲಿ.
"
ದಂಪತಿಗಳು ಖುಷಿಯಾಗಿದ್ದರು ನಮ್ಮ ಜೊತೆ ಮಾತನಾಡಿದ ಮೇಲೆ. ಬನ್ನಿ ನಮ್ಮ ಮನೆಗೆ ಸಮಯ ಸಿಕ್ಕಾಗ ಅಂದರು ಆಯ್ತು ಬರುತ್ತೇವೆ ಅಂತ ಹೇಳಿದೆವು.
"ಮಣ್ಣಿನ ಮಡಿಕೆ ಹಾಗೂ ಸುಂದರವಾದ ಸಂಬಂಧದ ಬೆಲೆ ಅದನ್ನು ಮಾಡುವವರಿಗೆ ಮಾತ್ರ ತಿಳಿದಿರುತ್ತದೆಯೇ ಹೊರತು ಒಡೆಯುವವರಿಗಲ್ಲ".
ಮುಸ್ಲಿಮ್ ದಂಪತಿಗಳು ಬೈಕ್ ಸ್ಟಾರ್ಟ್ ಮಾಡಿ ಹೊರಟಾಗ ಅವರ ಮುಖದಲ್ಲಿ ಒಂಥರಾ ನೆಮ್ಮದಿ ಕಾಣಿಸುತ್ತಿತ್ತು.ಅದನ್ನು ನೋಡಿದಾಗ
ನನ್ನ ಮನಸ್ಸಿನಲ್ಲಿ ಏನೋ ಒಂಥರಾ ಹೇಳಲಾಗದ ಖುಷಿ ಆಗುತ್ತಿತ್ತು...ದ್ವೇಷಿಸುವುದನ್ನು ಕ್ಷಣಮಾತ್ರದಲ್ಲಿ ಕಲಿಯುವ ಜನರು ಪ್ರೀತಿಸುವುದನ್ನು ಕಲಿಯಲು ಮಾತ್ರ ಜೀವನದ ಕೊನೆಯ ಕ್ಷಣದವರೆಗೂ ಕಾಯುತ್ತಾರೆ...
ಹಿಂದು ಮುಸ್ಲಿಮನಾಗು
ಬೌದ್ಧ ಕ್ರೈಸ್ತನೆ ಆಗು
ಚಾರ್ವಾಕನೇ ಆಗು
ಭೋಗ ಬಯಸಿ
ಏನಾದರೂ ಆಗು
ಹಾರೈಸಿದಂತಾಗು
ಏನಾದರೂ ಸರಿಯೆ –
ಮೊದಲು ಮಾನವನಾಗು
(ಸಿದ್ಧಯ್ಯ ಪುರಾಣಿಕ ಅವರು ಬರೆದ ಸಾಲುಗಳು ಇದು)....
✍️ಎನ್.ಆರ್.ಕೆ.ನೇರಳಕಟ್ಟೆ
Wednesday, 20 May 2015
"ಬುದ್ಧಿವಂತಿಕೆ"
ಪ್ರತಿಷ್ಟಿತ ಕಂಪನಿಯಲ್ಲಿ ಜನರಲ್ ಮ್ಯಾನೇಜರ್ ಹುದ್ದೆಗೆ ಸಂದರ್ಶನಕ್ಕೆ ಕರೆದಿದ್ದರು.
ಇರುವ ಒಂದು ಹುದ್ದೆಗೆ 8 ಜನ ಅಭ್ಯರ್ಥಿಗಳು ಸಂದರ್ಶನಕ್ಕೆ ಬಂದಿದ್ದರು.
3 ಸುತ್ತು ನಡೆದ ಪರೀಕ್ಷೆಯಲ್ಲಿ ಎಲ್ಲರೂ ಉತ್ತಮವಾಗಿ ಬರೆದಿದ್ದರು.ಯಾರನ್ನು ಆಯ್ಕೆ ಮಾಡುವುದು ಅಂತ ಗೊಂದಲದಲ್ಲಿದ್ದರು
ಕಂಪೆನಿಯ ಎಮ್.ಡಿ. ಬಂದು ಎಲ್ಲಾ ಅಭ್ಯರ್ಥಿಗಳನ್ನು ಕರೆದು ಕೇವಲ 2 ನಿಮಿಷ ಅವಧಿಯಲ್ಲಿ ಒಂದು ಸುಂದರ ಆನೆಯ ಚಿತ್ರ ಬಿಡಿಸಿ ಅಂದರು.
ಯಾರು ಸಹ ಇಂಥ ಪ್ರಶ್ನೆಯನ್ನು ಕೇಳುತ್ತಾರೆ ಅಂತ ಅಂದುಕೊಂಡಿರಲಿಲ್ಲ.ಎಲ್ಲರೂ ಗಲಿಬಿಲಿಗೊಂಡು ಚಿತ್ರ ಬಿಡಿಸಲ್ಲಿಕ್ಕೆ ಶುರುಮಾಡಿದರು.
2 ನಿಮಿಷ ಅವಧಿ ಪೂರ್ಣಗೊಂಡಿತು.ಯಾರು ಆನೆಯ ಚಿತ್ರವನ್ನು ಸಂಪೂರ್ಣಗೊಳಿಸಿರಲಿಲ್ಲ.
ಆದರೆ ಒಬ್ಬ ಮಾತ್ರ ಆನೆಯ ಚಿತ್ರ ಬಿಡಿಸದೇ ಒಂದು ಗೋಡೆಯ ಚಿತ್ರ ಬಿಡಿಸಿ ಅದರ ಪಕ್ಕದ್ದಲ್ಲಿ ಚಂದವಾಗಿ ಆನೆಯ ಸೊಂಡಿಲ ಚಿತ್ರ ಬರೆದಿದ್ದ.
ಆ ಚಿತ್ರ ನೋಡಿದ ಎಮ್.ಡಿ. ಅವನನ್ನು ಕರೆದು ಏನಿದು ಅಂತ ಕೇಳಿದ
ಅದಕ್ಕೆ ಅವನು ಅದು ಆನೆಯ ಚಿತ್ರವೇ ಆದರೆ ಆ ಆನೆ ಗೋಡೆಯ ಪಕ್ಕದಲ್ಲಿ ನಿಂತಿದೆ ಅದಕ್ಕೆ ಅದರ ಸೊಂಡಿಲು ಮಾತ್ರ ಕಾಣುತ್ತಿದೆ ಸರ್ ಅಂದುಬಿಟ್ಟ.
ಎಮ್.ಡಿ.ಗೆ ತುಂಬಾ ಖುಷಿಯಾಯಿತು ಅವನ ಸಮಯಪ್ರಜ್ನೆ,ಬುದ್ದಿವಂತಿಕೆ ನೋಡಿ ಅವನನ್ನೆ ಆ ಹುದ್ದೆಗೆ ಆಯ್ಕೆ ಮಾಡಿದರು.
ಎನ್.ರಾಜೇಶ್.ಕುಮಾರ್.ನೇರಳಕಟ್ಟೆ.
Tuesday, 25 February 2014
"ಮಡದಿ"
ತಲೆಯೆಲ್ಲಾ ನೋವಿನಿಂದ ಕೂಡಿದ ಅನುಭವ,ನನ್ನ ಸುತ್ತಲೂ ತುಂಬಾ ಜನ ಮಾತಾಡುತ್ತಿದ್ದಾರೆ ಅಂತ ಅನಿಸುತ್ತಿದೆ.ಈವಾಗ ಎಲ್ಲಿದ್ದೇನೆ,ಏನಾಯ್ತು ಅಂತ ನೆನಪಿಗೆ ಬರುತ್ತಿಲ್ಲ.ಅಷ್ಟರಲ್ಲಿ ಅಪ್ಪ- ಅಮ್ಮ "ಮನು" ಅಂದರು ನಾನು "ಅಮ್ಮ ನಾವೆಲ್ಲಿದ್ದೇವೆ ಏನಾಯ್ತು ನನಗೆ ತಲೆ,ಮೈಕೈಯೆಲ್ಲಾ ತುಂಬಾ ನೋವಾಗುತ್ತಿದ್ದೆ ಅಂದಾಗ ನಾವೀಗ ಆಸ್ಪತ್ರೆಯಲ್ಲಿದ್ದೇವೆ ಅಂದರು ಅಮ್ಮ.ತಕ್ಷಣವೇ ಅಪ್ಪ-ಅಮ್ಮ ನಾನು ನನ್ನ ಮಡದಿ ಹಾಸಿನಿ ದೇವರ ದರ್ಶನಕ್ಕೆ ಹೋಗಿಬರುವಾಗ ಆದ ಅಪಘಾತದ ನೆನಪಾಯಿತು ಅಷ್ಟೇ ಮುಂದೆ ಏನಾಯಿತು ಅಂತ ನೆನಪಿಲ್ಲ.ಕೂಡಲೇ ಹಾಸಿನಿ ನೆನಪಾದಳು ದುಗುಡದಿಂದಲೇ ಅಮ್ಮನನ್ನು ಕೇಳಿದೆ "ಹಾಸಿನಿ" ಹೇಗಿದ್ದಾಳೆ ಆರೋಗ್ಯವಾಗಿದ್ದಾಳೆ ಅಲ್ವಾ ಅವಳಿಗೆ ಏನು ಪೆಟ್ಟಾಗಿಲ್ಲ ತಾನೇ?."ಚೆನ್ನಾಗಿದ್ದಾಳೆ ಸ್ವಲ್ಪ ಗಾಯವಾಗಿದೆ ಪಕ್ಕದ ವಾರ್ಡಿನಲ್ಲಿ ಮಲಗಿದ್ದಾಳೆ" ಅಂದರು.ತುಸುನೆಮ್ಮದಿಗೊಂಡಿತು ಮನಸ್ಸು.ನನ್ನ ಜೀವನಕ್ಕೆ ಬೆಳಕನ್ನು ತಂದವಳು ಹಾಸಿನಿ.ಅವಳು ನನ್ನ ಜೀವನಕ್ಕೆ ಬರದೇ ಹೋಗಿದ್ದರೆ ನನ್ನ ಜೀವನದಲ್ಲಿ ಬರಿ ಕತ್ತಲೆ ತುಂಬಿಕೊಂಡಿರುತ್ತಿತ್ತು.ಅವಳು ನನ್ನ ಜೀವನದೊಳಗೆ ಬಂದದ್ದು ನೆನಪಾಗಲ್ಲಿಕ್ಕೆ ಶುರುವಾಯಿತು
ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ಕನಸುಗಳಿರುತ್ತದೆ,ಕ್ರಿಕೇಟ್ ಆಟಗಾರ,ಸಿನಿಮಾ ನಾಯಕ,ರಾಜಕಾರಣಿ,ಶ್ರೀಮಂತ,ಪತ್ರಕರ್ತ,ವಿಜ್ಞಾನಿ ಮತ್ತು ಲೇಖಕನಾಗಬೇಕೆಂಬ ಕನಸುಗಳಿರುತ್ತದೆ.ಅದಕ್ಕಾಗಿ ಪ್ರಯತ್ನಿಸಿದರೆ ಅದು ಸಾಧ್ಯವಾಗುವುದರಲ್ಲಿ ಅನುಮಾನವೇ ಇಲ್ಲ.ನನಗೆ ಇಂಥ ಕನಸುಗಳಿರಲಿಲ್ಲ ಆದರೆ ವಿಚಿತ್ರವಾದ ಕನಸೊಂದಿತ್ತು.ನಾನು ಪುಸ್ತಕಪ್ರಿಯ ಅದಕ್ಕೆ ಬಾಲ್ಯದಿಂದಲೂ ಪುಸ್ತಕವನ್ನು ಸಂಗ್ರಹಿಸಿಡುತ್ತಿದ್ದೆ.ಆದರೆ ಅಲ್ಲಿರುವ ಯಾವ ಪುಸ್ತಕಗಳನ್ನು ಓದಿರಲಿಲ್ಲ "ಓದಲ್ಲಿಕ್ಕೆ ಸಾಧ್ಯವಾಗುತ್ತಿರಲ್ಲಿಲ್ಲ ನನ್ನಿಂದ".ಎಲ್ಲಾ ಕೇಳುತ್ತಿದ್ದರು ಪುಸ್ತಕ ಓದದೇ ಇರುವವನ್ನು ಪುಸ್ತಕಗಳನ್ನು ಯಾಕೆ ತಂದು ಸಂಗ್ರಹಿಸುತ್ತಿಯಾ ಅಂತ. ನಾನು ಅದಕ್ಕೆ ಇದೆಲ್ಲ ನನ್ನ ಹೆಂಡತಿಯಾಗಿ ಬರುವವಳಿಗೆ ನನ್ನ ಉಡುಗೊರೆ. ಅವಳು ಪ್ರೀತಿಯಿಂದ ಓದಿ ನನಗೆ ಹೇಳಬೇಕು ಇದು ನನ್ನ ಜೀವನದ ಕನಸು ಅಂತ ಹೇಳುತ್ತಿದ್ದೆ.ಅವರೆಲ್ಲ ನಗಾಡಿಕೊಳ್ಳುತ್ತಿದ್ದರು ನನ್ನ ಕನಸಿನ ಬಗ್ಗೆ.
ನನ್ನ ಬಗ್ಗೆ,ನನ್ನ ಪ್ರೀತಿಯ ಕನಸಿನ ಬಗ್ಗೆ ತಿಳಿದವರು ಯಾರು ಹೆಣ್ಣು ಕೊಡುವುದಕ್ಕೆ ಮುಂದೆ ಬರಲಿಲ್ಲ.ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ.ಅಪ್ಪ-ಅಮ್ಮ ನನಗೆ ಮದುವೆ ಮಾಡಲೇಬೇಕು ಅಂತ ತುಂಬಾ ಹುಡುಕಾಡಿ ಕೊನೆಗೂ ಒಬ್ಬಳನ್ನು ಹುಡುಕಿದರು ಅವಳೇ ಹಾಸಿನಿ. ನಾನು ಅಮ್ಮನ ಹತ್ತಿರ ಹೇಳಿದೆ ಆ ಹುಡುಗಿಯ ಜೊತೆ ಮಾತನಾಡಬೇಕು ಅಂದಾಗ ಅಮ್ಮ ಒಪ್ಪಿಗೆ ಕೊಟ್ಟು ಮರುದಿನ ಹಾಸಿನಿ ಬಂದಳು.ಅಮ್ಮ ನನ್ನ ಜೊತೆಯಲ್ಲಿಯೇ ಕುಳಿತುಕೊಂಡಿದ್ದರು.ನಾನು ನಿಮ್ಮ ಹೆಸರೇನು? ಏನು ಮಾಡಿಕೊಂಡಿದ್ದೀರಾ?.ಅದಕ್ಕೆ ಹಾಸಿನಿ ನಗುತ್ತ "ನನ್ನ ಹೆಸರು ಹಾಸಿನಿ ನಾನು ಕುರುಡರ ಅನಾಥಾಶ್ರಮದಲ್ಲಿ ಕುರುಡು ಮಕ್ಕಳಿಗೆ ಪಾಠ ಹೇಳಿಕೊಡುವ ಟೀಚರ್ ಕೆಲಸ ಮಾಡುತ್ತಿದ್ದೇನೆ" ನಾನು "ಅಪ್ಪ-ಅಮ್ಮ ಏನು ಮಾಡುತ್ತಾರೆ?" ಅವಳು "ನನಗೆ ಅಪ್ಪ-ಅಮ್ಮ ಯಾರು ಇಲ್ಲ ನಾನು ಅದೇ ಅನಾಥಾಶ್ರಮದಲ್ಲಿ ಬೆಳೆದವಳು ಈವಾಗ ಅಲ್ಲಿಯೇ ಇದ್ದೇನೆ" ಅಂದಳು ನಾನು ಸಾರಿ ಕೇಳಿದೆ ನಂತರ "ನನ್ನ ಬಗ್ಗೆ ಪೂರ್ತಿ ತಿಳಿದುಕೊಂಡಿದ್ದೀರಾ ತಾನೇ ನಮ್ಮ ಅಪ್ಪ-ಅಮ್ಮನ ಒತ್ತಾಯಕ್ಕೆ ಅಥವಾ ಅನುಕಂಪಕ್ಕೊ ನನ್ನನ್ನು ಮದುವೆಯಾಗುತ್ತೀನಿ ಅಂದರೆ ನಾನು ಇದಕ್ಕೆ ಒಪ್ಪುದಿಲ್ಲ ಅಂದೆ.ಅದಕ್ಕವಳು ನಾನು ಯಾರ ಒತ್ತಾಯಕ್ಕೆ ಮಣಿದಿಲ್ಲ. ನಿಮ್ಮಂಥವರನ್ನು ಮದುವೆಯಾಗುವುದು ನನ್ನ ಅದೃಷ್ಟ ನಾನು ಮನಸಾರೆ ನಿಮ್ಮನ್ನು ಮದುವೆಯಾಗುವುದಕ್ಕೆ ಒಪ್ಪಿದ್ದೇನೆ ನೀವು ಒಪ್ಪಿದರೆ ನಿಮ್ಮ ಕಣ್ಣಾಗಿರುತ್ತೇನೆ ಅಂದಾಗ ನನಗೆ ತುಂಬಾ ಖುಷಿಯಾಯಿತು.ನಾನು ಒಪ್ಪಿಗೆಕೊಟ್ಟೆ ಸರಳ ರೀತಿಯಲ್ಲಿ ನಮ್ಮಿಬ್ಬರ ವಿವಾಹ ಜರುಗಿತು.
ನಾನು ಅಂದುಕೊಂಡಿದ್ದಕ್ಕಿಂತಲೂ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು ನನ್ನ ಮುದ್ದು ಮಡದಿ.ನಾನು ಅವಳು ಬಂದಮೇಲೆ ನಾನು ಅಪ್ಪ-ಅಮ್ಮ ತುಂಬಾ ಸಂತೋಷವಾಗಿದ್ದೇವು.ನಮ್ಮ ಸುಖಸಂಸಾರ ನೋಡಿ ದೇವರಿಗೆ ಅಸೂಯೆ ಉಂಟಾಯಿತು ಅನಿಸುತ್ತದೆ.ಮದುವೆಯಾದ ಮೇಲೆ ಪ್ರಥಮಬಾರಿಗೆ ದೇವಸ್ಥಾನಕ್ಕೆ ಹೋಗಲು ನಿರ್ಧರಿಸಿ ಹೋಗಿದ್ದೇವು ಹೋಗಿ ಬರುವಾಗ ಆಗಿರುವುದು ಅಪಘಾತ.ಕೂಡಲೇ ವಾಸ್ತವಕ್ಕೆ ಬಂದೆ ಅಪ್ಪ ಮತ್ತು ಡಾಕ್ಟರ್ ಮಾತನಾಡುತ್ತಿದ್ದರು.ಅದಾದ ಒಂದು ವಾರ ಕೂಡ ಹಾಸಿನಿಯನ್ನು ಮಾತನಾಡಿಸಲ್ಲಿಕ್ಕೆ ಆಗಲಿಲ್ಲ.ಅಪ್ಪ-ಅಮ್ಮ ನನ್ನಿಂದ ಏನೋ ಮುಚ್ಚಿಡುತ್ತಾರೆ ಅನಿಸಲ್ಲಿಕ್ಕೆ ಶುರುವಾಯಿತು.
ಡಾಕ್ಟರ್ ಬಂದು ಕಣ್ಣಿಗೆ,ತಲೆಗೆ ಸುತ್ತಿದ ಬ್ಯಾಂಡೇಜ್ ಬಿಚ್ಚುವುದಕ್ಕೆ ಶುರುಮಾಡಿದರು.ಡಾಕ್ಟರ್ ಮನು ನಿಧಾನವಾಗಿ ಕಣ್ಣು ತೆರೆಯಿರಿ ಅಂದರು ನನಗೆ ಆಶ್ಚರ್ಯವಾಯಿತು ಆದರೂ ಧೈರ್ಯಮಾಡಿ ಕಣ್ಣುತೆರೆದು ನೋಡಿದರೆ ವಯಸ್ಸಾದ ದಂಪತಿಗಳು ಪಕ್ಕದಲ್ಲಿ ಡಾಕ್ಟರ್ ಇದ್ದರು.ನನಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ. ಹುಟ್ಟುಕುರುಡನಾದ ನನಗೆ ಮೊದಲಬಾರಿಗೆ ದೃಷ್ಟಿ ಬಂದಿತ್ತು ಯಾರು ನನಗೆ ಕಣ್ಣು ದಾನ ಮಾಡಿದರೋ ಗೊತ್ತಿಲ್ಲ.ಕಣ್ಣು ಕೊಟ್ಟವರಿಗೆ ಮನಸ್ಸಿನಲ್ಲಿಯೇ ವಂದಿಸಿದೆ.ಅಲ್ಲಿ ನಿಂತಿರುವವರೇ ನನ್ನ ತಂದೆ-ತಾಯಿ ಅಂತ ಗೊತ್ತಾಯಿತು.ಅಪ್ಪ-ಅಮ್ಮನನ್ನು ಕಣ್ಣುತುಂಬಾ ನೋಡಿದೆ.ಅಮ್ಮ ಹಾಸಿನಿಯನ್ನು ನೋಡಬೇಕು ಏಲ್ಲಿದ್ದಾಳೆ ಅಂತ ಕೇಳಿದೆ.ಅಮ್ಮ ಅಳುವುದಕ್ಕೆ ಶುರುಮಾಡಿದಳು.ಅವಾಗ ಡಾಕ್ಟರ್ "ಮನು ಸ್ವಲ್ಪ ಧೈರ್ಯ ತಂದುಕೊಳ್ಳಿ ನಿಮ್ಮ ಕಾರಿಗೆ ಅಪಘಾತದಲ್ಲಿ ನಿಮ್ಮ ಪತ್ನಿ ಅಸುನೀಗಿದ್ದಾರೆ ಅವರ ಎರಡು ಕಣ್ಣನ್ನು ನಿಮಗೆ ಹಾಕಿದ್ದೇವೆ ಅಂದರು.ನನಗೆ ಆ ಮಾತು ಕೇಳಿದ ಕೂಡಲೇ ಆ ಕ್ಷಣವೇ ನಾನು ಸತ್ತುಹೋಗಿದ್ದರೆ ಖುಷಿಯಾಗುತ್ತಿದ್ದೆ .ಕಣ್ಣು ಬಂದು ಖುಷಿಗಿಂತ ನನ್ನ ಮುದ್ದುಮಡದಿ ನನ್ನನ್ನು ಒಂಟಿಯಾಗಿ ಬಿಟ್ಟುಹೋಗಿದ್ದು ನನಗೆ ತಡೆಯಲಾರದ ನೋವು ಕೊಟ್ಟಿತ್ತು.
ಹುಟ್ಟುಕುರುಡನಾದ ನನ್ನನ್ನು ಮದುವೆಯಾಗಿ ನನಗೆ ಖುಷಿಕೊಟ್ಟವಳು.ನಿಮಗೆ ಬಾಳಿನುದ್ದಕ್ಕೂ ಕಣ್ಣಾಗಿರುತ್ತೇನೆ ಅಂತ ಹೇಳಿದವಳು ಕೊನೆಗೂ ತನ್ನ ಕಣ್ಣನ್ನು ನನಗೆ ನೀಡಿ ಅವಳ ಮಾತನ್ನು ಉಳಿಸಿಕೊಂಡಿದ್ದಳು.ಕೊನೆಯ ಬಾರಿ ಅವಳ ಮುಖದರ್ಶನವೇ ನೀಡದೆ ಹೋದಳು.ನನ್ನ ಕೈಯಲ್ಲಿರುವ ನಮ್ಮಿಬ್ಬರ ಪೋಟೊದ ಮೇಲೆ ಅವಳ ಕಣ್ಣಿನಿಂದ ನನ್ನ ಹೃದಯದ ನೋವು ಕಣ್ಣೀರಾಗಿ ಕೆಳಗೆ ಬೀಳುತ್ತಿತ್ತು
ಎನ್.ರಾಜೇಶ್.ಕುಮಾರ್.ನೇರಳಕಟ್ಟೆ

ಕನ್ನಡ ಪುಸ್ತಕಗಳ ಸ್ಥಿತಿ
ನನಗೆ ರವಿ ಬೆಳಗೆರೆಯವರ "ನಕ್ಷತ್ರ ಜಾರಿದಾಗ" ಮತ್ತು ಯಂಡಮೂರಿಯವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ "ದೀಪ ದೃಷ್ಟಿ" ಪುಸ್ತಕಗಳೆರೆಡು ಸಿಕ್ಕಿರಲಿಲ್ಲ.ತುಂಬಾ ಹುಡುಕಾಡಿದೆ. ಪುಸ್ತಕದಂಗಡಿಗಳಲ್ಲೂ,ಫ಼ೇಸಬುಕಿನಲ್ಲಿ ಸಹ ವಿಚಾರಿಸಿದೆ ಎಲ್ಲೂ ಸಿಗಲಿಲ್ಲ.ಕೊನೆಗೆ ಗೆಳೆಯನೊಬ್ಬ ಮೈಸೂರ್ ಬ್ಯಾಂಕ್ ಸರ್ಕಲಿನಲ್ಲಿ ಹಳೆಯ ಪುಸ್ತಕಗಳನ್ನು ಮಾರುವ ಅಜ್ಜ ಇದ್ದಾರೆ ಅವರ ಹತ್ತಿರ ಹೋಗಿ ವಿಚಾರಿಸು ಅಂತ ಹೇಳಿದ.ಅದಕ್ಕಾಗಿ ಇವತ್ತು ಬೆಳಿಗ್ಗೆ ಮ್ಯಾಚ್ ಮುಗಿಸಿಕೊಂಡು ಆ ಅಜ್ಜನ ಹತ್ತಿರ ಹೋಗಿದ್ದೆ ಅಲ್ಲೂ ಸಿಗಲಿಲ್ಲ ಆದರೆ ಸಾಧ್ಯವಾದರೆ ತರಿಸಿಕೊಡುತ್ತೇನೆ ಅಂತ ಹೇಳಿದರು ಅಜ್ಜ.ಅಲ್ಲಿಯೇ ಇದ್ದ ಪುಸ್ತಕಗಳನ್ನು ನೋಡುವಾಗ "ಮಹಾತ್ಮ ಗಾಂಧೀಜಿಯವರ ಆತ್ಮಕಥೆ" ಪುಸ್ತಕ ಅದನ್ನು ಕನ್ನಡಕ್ಕೆ ಗೊರೂರು ರಾಮಸ್ವಾಮಿಯವರು "ನನ್ನ ಸತ್ಯಾನ್ವೇಷಣೆ" ಅಂತ ಅನುವಾದ ಮಾಡಿದ ಪುಸ್ತಕ ಅಲ್ಲಿತ್ತು. ನಾನು ಈ ಪುಸ್ತಕಕ್ಕೆ ಏಷ್ಟು ಅಂತ ಕೇಳಿದೆ. ಅಜ್ಜ ಹೇಳಿದರು "ಇಪ್ಪತ್ತು ರೂಪಾಯಿ" ಕೊಡಿ ಅಂತ.ನನಗೆ ಆಶ್ಚರ್ಯವಾಯಿತು ೫೨೦ ಪುಟಗಳಿರುವ ಅದು ನಮ್ಮ ದೇಶದ ಮಹಾತ್ಮನ ಆತ್ಮಕಥೆ ಇರುವ ಪುಸ್ತಕಕ್ಕೆ ಕೇವಲ ೨೦ ರೂಪಾಯಿ ಅಂದಾಗ. ನಾನು ಮತ್ತೆ ಕೇಳಿದೆ ಅಂಕಲ್ ಗಾಂಧೀಜಿಯವರ ಪುಸ್ತಕಕ್ಕೆ ಬೆಲೆನೇ ಇಲ್ವಾ ಇಷ್ಟು ಕಮ್ಮಿ ಕೇಳುತ್ತಿದ್ದೀರಿ ಅಂದೆ.ಮೂರು ತಿಂಗಳಿನಿಂದ ನನ್ನ ಹತ್ತಿರವೇ ಇದೆ ಈ ಪುಸ್ತಕ ೨೦ ರೂಪಾಯಿಗೆ ಕೊಡುತ್ತಿನಿ ಅಂದರು ಯಾರು ತೆಗೆದುಕೊಂಡು ಹೋಗಲಿಲ್ಲ ನೀನು ಬೆಲೆ ಬಗ್ಗೆ ಮಾತನಾಡುತ್ತೀಯಾ.ಓದುಗರ ಮನಸ್ಥಿತಿ ಬದಲಾಗಿದೆ ಕಣ್ಣಪ್ಪಾ, ಅಲ್ನೋಡು ಅಲ್ಲಿರುವ ಕ್ರೈಮ್,ಸ್ಪೈ,ಥ್ರಿಲ್ ದಿನಕ್ಕೆ ೧೫ ಪುಸ್ತಕ ಮಾರಾಟವಾಗುತ್ತೆ ಅದು ನಾವು ಕೇಳಿದ ಬೆಲೆಗೆ.ಬೇರೆ ಕನ್ನಡ ಕಾದಂಬರಿ, ಕವನದ ಪುಸ್ತಕಗಳು ಅರ್ಧಬೆಲೆಗೆ ಕೊಡುತ್ತೀನಿ ಅಂದರೂ ಹೆಚ್ಚಿನವರು ತೆಗೆದುಕೊಳ್ಳುವುದಿಲ್ಲ.೭೦೦ ಪುಟಗಳಿರುವ ಮಹಾಭಾರತ,ರಾಮಾಯಣ ಪುಸ್ತಕಗಳಿಗೆ ೧೦೦ ರೂಪಾಯಿ ಕೊಡಿ ಅಂದರೆ ಯಾರು ಕೊಡುವುದಿಲ್ಲ.ಅದೇ ೩೦ ಪುಟಗಳಿರುವ ಸೆಕ್ಸ್ ಪುಸ್ತಕಗಳಿಗೆ ಪುಲ್ ರೇಟ್ ಕೊಟ್ಟು ಖರೀದಿ ಮಾಡುತ್ತಾರೆ ಅಂತ ಅಜ್ಜ ಹೇಳಿದರು.ಅವರ ಮಾತಿಗೆ ಏನು ಹೇಳಬೇಕು ಅಂತ ತಿಳಿಯದೇ ಗಾಂಧೀಜಿಯವರ ಆತ್ಮಕಥೆ ಪುಸ್ತಕಕ್ಕೆ ೨೦ ರೂಪಾಯಿ ಕೊಟ್ಟು ತಗೊಂಡು ಮನೆಗೆ ಬಂದೆ.
-ಎನ್.ಆರ್.ಕೆ.
-ಎನ್.ಆರ್.ಕೆ.
"ಅಪ್ಪ-ಮಗ"
ಮುಸ್ಸಂಜೆಯ ವೇಳೆ ಸೂರ್ಯ ತನ್ನ ದಿನದ ಕೆಲಸ ಮುಗಿಸಿ ಪಡುವಣದತ್ತ ಹೋಗುತ್ತಿದ್ದಾನೆ.ಹಕ್ಕಿಗಳು ಚಿಲಿಪಿಲಿಗುಟ್ಟುತ್ತ ತಮ್ಮ ಮನೆ ಕಡೆಗೆ ಹೋಗುತ್ತಿದ್ದವು. ಏಳನೀರು ವ್ಯಾಪಾರಿ ರಾಮಣ್ಣ ಈ ಲೋಕದ ವ್ಯಾಪಾರ ಮುಗಿಸಿ ದೇವರ ಹತ್ತಿರ ಹೋಗಲು ಕೊನೆಘಳಿಗೆ ಏಣಿಸುತ್ತಿದ್ದನು.ಊರಿನ ಜನರೆಲ್ಲಾ ರಾಮಣ್ಣನ ಮನೆಯ ಬಳಿ ಬಂದಿದ್ದರು.ಅಷ್ಟರಲ್ಲಿ ಸುಮ್ಮನಿದ ಬಂಡೆಗೆ ಅಲೆ ಅಪ್ಪಳಿಸಿದಂತೆ ರಾಮಣ್ಣನ ತೆಂಗಿನಮರಕ್ಕೆ "ಸಿಡಿಲು" ಬಡಿಯಿತು ಆ ಮರ ಅಲ್ಲಿಯೇ ತುಂಡಾಗಿ ಕೆಳಗೆಬಿತ್ತು.ಯಾರೋ ಕೂಗಿ ಹೇಳಿದ "ರಾಮಣ್ಣನ ಸಾಕುಮಗ(ತೆಂಗಿನಮರ) ಸಿಡಿಲಿನ ಹೊಡೆತಕ್ಕೆ ಸಿಕ್ಕಿ ತುಂಡಾಗಿಬಿಟ್ಟಿತು" ಆ ಮಾತನ್ನು ಕೇಳಿದ ತಕ್ಷಣ ಇಷ್ಟೊತ್ತು ಬಿಗಿಹಿಡಿದಿದ್ದ ತನ್ನ ಉಸಿರನ್ನು ನಿಲ್ಲಿಸಿದ.
ರಾಮಣ್ಣ ಬಡ ಏಳನೀರು ವ್ಯಾಪಾರಿ.ಪರೋಪಕಾರಿ ಮನೋಭಾವದ ಸಹೃದಯದ ವ್ಯಕ್ತಿ ಆಗಿರುವುದರಿಂದ ಊರಿನವರಿಗೆ ಅವನನ್ನು ಕಂಡರೆ ತುಂಬಾ ಪ್ರೀತಿ.ರಾಮಣ್ಣನ ಹೆಂಡತಿ ತನ್ನ ಮೊದಲ ಹೆರಿಗೆಯಲ್ಲಿ ಗಂಡುಮಗುವನ್ನು ಕೊಟ್ಟು ದೇವರ ಪಾದ ಸೇರಿದ್ದಳು.ಹೆಂಡತಿ ಸುಟ್ಟ ಜಾಗದಲ್ಲಿ ಒಂದು ತೆಂಗಿನ ಸಸಿಯನ್ನು ನೆಟ್ಟಿದ.ಮಗನನ್ನು ಪ್ರೀತಿಯಿಂದ ನೋಡಿಕೊಳ್ಳುವ ಹಾಗೆ ಆ ತೆಂಗಿನಗಿಡವನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ.ದನಕರುಗಳಿಂದ ರಕ್ಷಿಸಿ ಪ್ರತಿದಿನ ತಪ್ಪದೇ ನೀರುಣಿಸುತ್ತಿದ್ದ.ಎಲ್ಲರಿಗೂ ಮಗನನ್ನು ತೋರಿಸಿ ಇವನು ನನ್ನ ಸ್ವಂತ ಮಗ,ತೆಂಗಿನಮರವನ್ನು ತೋರಿಸಿ ಸಾಕುಮಗ ಅನ್ನುತಿದ್ದ.ಮಗನ ವಿದ್ಯಾಭ್ಯಾಸಕ್ಕೆ ತನ್ನಲ್ಲಿರುವದೆಲ್ಲವನ್ನು ಕೊಟ್ಟಿದ್ದ.
ಮಗ ಮತ್ತು ಸಾಕುಮಗ ಇಬ್ಬರು ಬೆಳೆದು ದೊಡ್ಡವರಾದರು.ಮಗನ ಖರ್ಚಿಗೆ ಎಷ್ಟು ಕೊಟ್ಟರು ಸಾಲದು ಅಂತ ಕೂಗಾಡುತ್ತಿದ್ದ.ಸಾಕುಮಗ ತನ್ನ ಸಾಕುತಂದೆಯಿಂದ ಏನು ತೆಗೆದುಕೊಳ್ಳದೇ ಅಪ್ಪನಿಗೆ ಪ್ರೀತಿಯಿಂದ ತನ್ನದೆಲ್ಲಾವನ್ನು ಕೊಡುತ್ತಿದ್ದ.ಮುದಿ ಅಪ್ಪನನ್ನು ಸಾಕಲು ಆಗದೇ ಸ್ವಂತ ಮಗ ಹೇಳದೇ ಕೇಳದೆ ಊರುಬಿಟ್ಟು ಓಡಿಹೋದ.ಆ ಘಟನೆಯ ನಂತರ ಪೂರ್ತಿ ಕುಗ್ಗಿಹೋದ.ತನ್ನ ಮಗ ನನಗೆ ಮಾಡಿದ ಮೋಸವನ್ನು ನೆನೆದು ಪ್ರತಿದಿನ ಅಳುತ್ತಿದ್ದ.ಸಾಕುಮಗನ ಆದಾಯದಿಂದ ರಾಮಣ್ಣನ ಜೀವನ ನಡೆಯುತ್ತಿತ್ತು.ಸ್ವಂತ ಮಗ ಕೈಬಿಟ್ಟರೂ ಸಾಕುಮಗ ಕೈಬಿಡಲಿಲ್ಲ.
ಪ್ರೀತಿಯಿಂದ ಸಾಕಿದ ಮಗ ಜೀವನದ ಇಳಿವಯಸ್ಸಿನಲ್ಲಿ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಅನ್ನುವ ನಂಬಿಕೆಯಲ್ಲಿದ್ದ ಅಪ್ಪನಿಗೆ ಮಗ ಮಾಡಿದ ನಂಬಿಕೆ ದ್ರೋಹವನ್ನು ಆ ಮುದಿ ಹೃದಯ ಏಷ್ಟುದಿನ ತಡೆದಿತು.ಆ ಕೊರಗಿನಲ್ಲಿಯೇ ರಾಮಣ್ಣ ತನ್ನ ಕೊನೆಯ ಘಳಿಗೆ ಏಣಿಸುತ್ತಿದ್ದ.ಅದೇ ಸಮಯದಲ್ಲಿ ಆದ ಸಾಕುಮಗನ ಸಾವು ರಾಮಣ್ಣನ ಉಸಿರನ್ನು ನಿಲ್ಲಿಸಿಬಿಟ್ಟಿತು.
ಸಾಕುಮಗನನ್ನೇ(ತೆಂಗಿನಮರ) ಎರಡು ತುಂಡುಮಾಡಿ ಮಗನನ್ನು ಅಪ್ಪನ ಶವದ ಅಡಿಯಲ್ಲಿಟ್ಟು ಊರಿನ ಜನರು ಅವರಿಬ್ಬರ ಶವಕ್ಕೆ ಬೆಂಕಿಯಿಟ್ಟರು.ಅಪ್ಪ-ಮಗ ಇಬ್ಬರು ಜೊತೆಯಾಗಿ ಮೋಸದ ಪ್ರಪಂಚದದಿಂದ ಮುಕ್ತಿಹೊಂದಿ ದೇವರೆಡೆಗೆ ಹೊರಟರು.

Subscribe to:
Comments (Atom)