Wednesday, 11 March 2020
" ಮೆಟ್ರೋ ಹುಡುಗಿ"
OLX ನಲ್ಲಿ ಎಸ್.ಎಲ್.ಭೈರಪ್ಪನವರ 8 ಪುಸ್ತಕಗಳನ್ನು 50% ದರದಲ್ಲಿ ಕೊಡುತ್ತಾರೆ ಅಂತ ಕೊಟ್ಟಿದ್ದ ಪೋಸ್ಟ್ ನೋಡಿ ಆ ನಂಬರಿಗೆ ಫೋನ್ ಮಾಡಿ ಮಾತನಾಡಿದ ಮೇಲೆ ಅವರು CMH ರಸ್ತೆಯಲ್ಲಿ ರುವ ಕರ್ನಾಟಕ ಬ್ಯಾಂಕ್ ಎದುರುಗಡೆ ಇರುವ ಪಾರ್ಕ್ ಹತ್ತಿರ ಬರುವುದಕ್ಕೆ ಹೇಳಿದ್ದರು ಮೊಬೈಲ್ ನಲ್ಲಿ ಹಾಡು ಕೇಳುತ್ತಾ ಅಲ್ಲೇ ಕಾಯುತ್ತಿದ್ದೆ.ಕಾಯುವ ಕೆಲಸ ಯಾರಿಗೂ ಬೇಡ ಭೈರಪ್ಪ ನವರ ಪುಸ್ತಕ ಅನ್ನೋ ಒಂದೇ ಕಾರಣಕ್ಕೆ ಅವರನ್ನು ಕಾಯುತ್ತಿದ್ದೆ.
"ಆಕಾಶದಿಂದ ಧರೆಗಿಳಿದ ರಂಭೆ,
ಇವಳೇ ಇವಳೇ
ಚಂದನದ ಗೊಂಬೆ,
ಇವಳೇ ಇವಳೇ ಚಂದನದಗೊಂಬೆ ,
ಚೆಲುವಾದ ಗೊಂಬೆ,
ಚಂದನದ ಗೊಂಬೆ"
ಈ ಹಾಡು ಬರುವಾಗಲೇ ರಸ್ತೆಯಲ್ಲಿ ಬರುತ್ತಿದ್ದ ಬಿಳಿ ಚೂಡಿಧಾರ್ ಹುಡುಗಿಯನ್ನು ನೋಡಿದ್ದು🤣🤣🤣
(ಚಂದ ಗ್ವಾಂಪಿ ಚಂದ್ ಮುಡಿ ಇತ್ ಹೆಣ್ಣ್🙈)(ನನ್ನ ಕಂಡಗೆ ಬಿಲ್ಲಾಸ್ ಬಿಟ್ಟರಿಗೆ ಎಲ್ಲಾ ಹುಡುಗಿಯರು ಚಂದ ಕಾಣಿಸುತ್ತಾರೆ ಕಣ್ಣಿನ ಸಮಸ್ಯೆ ಅಥವಾ ವಯಸ್ಸಿನ ಸಮಸ್ಯೆಯೋ ಗೊತ್ತಿಲ್ಲ😜😜) ನಗುತ್ತಾ ಮೊಬೈಲ್ನಲ್ಲಿ ಮಾತನಾಡುತ್ತ ನಡೆದುಕೊಂಡು ಬರುತ್ತಿದ್ದಳು ಪ್ರಪಂಚವನ್ನೇ ಮರೆತವಳ ಹಾಗೇ.ಹೆಣ್ಣುಮಕ್ಕಳು ನಕ್ಕರೆ ಚಂದ ಯಾವಾಗಲೂ😍.ಆದರೆ ಅವಳ ಆ ನಗು ಜಾಸ್ತಿ ಸಮಯ ಇರಲಿಲ್ಲ..
ಅವಳ ಹಿಂದೆ ನಡೆದು ಬರುತ್ತಿದ್ದ ಒಬ್ಬನು ನೋಡುವುದಕ್ಕೆ ಪಕ್ಕಾ ಕಳ್ಳನ ತರಹ ಇದ್ದಾನೆ.ಇನ್ನೊಬ್ಬ ಅವಳ ಪಕ್ಕದಲ್ಲಿ ರಸ್ತೆಯಲ್ಲಿ ಬೈಕ್ನಲ್ಲಿ ನಿಧಾನವಾಗಿ ಅವಳನ್ನೇ ನೋಡುತ್ತಾ ಹೋಗುತ್ತಿದ್ದ. ಬೈಕ್ ನಲ್ಲಿರುವವನನ್ನು ನೋಡಿ ಅವಳು ಸ್ವಲ್ಪ ಭಯಗೊಂಡು ಸ್ವಲ್ಪ ರಸ್ತೆಯ ಪಕ್ಕಕ್ಕೆ ಸರಿದಳು ಆದರೆ ಅವಳು ಹಿಂದೆ ನೋಡಿರಲಿಲ್ಲ ಬರುತ್ತಿರುವವ ಇನ್ನೊಬ್ಬನನ್ನು.ಮನಸ್ಸು ಯಾವುದೋ ಕೇಡನ್ನು ಶಂಕಿಸಿತು.ಏನೋ ಕೆಟ್ಟದ್ದು ನಡೆಯಲಿದೆ ಅಂತ ಅಂದುಕೊಳ್ಳುತ್ತಿದ್ದೆ ನಾನು.
ಅಷ್ಟರಲ್ಲಿ KFC ಸರ್ಕಲ್ ಸಿಗ್ನಲ್ ಬಿಟ್ಟಿತು ತಕ್ಷಣ ಹಿಂದಿರುವವನು ಸಡನ್ನಾಗಿ ಮಾತನಾಡುತ್ತ ಹೋಗುತ್ತಿದ್ದ ಅವಳ ಕೈಯಿಂದ ಮೊಬೈಲ್ ಕಿತ್ತುಕೊಂಡು ಪಕ್ಕದಲ್ಲಿರುವ ಬೈಕ್ ನಲ್ಲಿ ಕುಳಿತುಕೊಂಡು ಪರಾರಿ ಆಗಿದ್ದರು ಇಬ್ಬರೂ ಕ್ಷಣ ಮಾತ್ರದಲ್ಲಿ.ಎಷ್ಟು ಚಾಲಾಕಿ ಕಳ್ಳರು ಹಾಡು ಹಗಲಿನಲ್ಲೇ ಏನು ಭಯವಿಲ್ಲದೆ ಮೊಬೈಲ್ ಕಳ್ಳತನ ಮಾಡಿಕೊಂಡು ಹೋಗಿದ್ದರು ನನ್ನ ಕಣ್ಣೆದುರೇ.ನಾನು ಏನು ಸಹಾಯ ಮಾಡುವುದಕ್ಕೆ ಆಗದೇ ಅಸಹಾಯಕನಾಗಿ ನಿಂತಿದ್ದೆ.
ಐದು ನಿಮಿಷಗಳ ಹಿಂದೆ ಪ್ರಪಂಚ ಮರೆತು ಫೋನಿನಲ್ಲಿ ಮಾತನಾಡುತ್ತಿದ್ದಳು ಈಗ ಪ್ರಪಂಚವನ್ನು ತನ್ನ ತಲೆಮೇಲೆ ಹೊತ್ತುಕೊಂಡವಳ ತರ ಕಾಣುತ್ತಿದ್ದಳು.ಕಣ್ಣುಮುಚ್ಚಿ ತೆಗೆಯುವುದರಲ್ಲಿ ಅವಳ ನಗು ಮುಖ ಮರೆಯಾಗಿ ದುಃಖದ ಮುಖ ಕಾಣುತ್ತಿತ್ತು ಕಣ್ಣಿನಲ್ಲಿ ನೀರು ಧಾರಾಕಾರವಾಗಿ ಸುರಿಯುತ್ತಿತ್ತು.ಅವಳನ್ನು ಮಾತನಾಡಿಸುವುದಾ ಬೇಡ್ವಾ ಅನ್ನೋ ಗೊಂದಲದಲ್ಲಿದ್ದೆ.ಆಮೇಲೆ ಧೈರ್ಯ ಮಾಡಿಕೊಂಡು ಹತ್ತಿರ ಹೋಗಿ "ಹಲೋ ಪ್ಲೀಸ್ ಅಳಬೇಡಿ ಮೊಬೈಲ್ ಹೋಗಿದ್ದು ನಾನು ನೋಡಿದೆ ಯಾರಿಗಾದರೂ ಫೋನ್ ಮಾಡಬೇಕಾ ಅಥವಾ ಏನಾದರೂ ಸಹಾಯ ಬೇಕಾ ಅಂತ ಕೇಳಿದೆ. ಅವಳು ಕಣ್ಣೀರು ಒರೆಸಿಕೊಳ್ಳುತ್ತ ನನ್ನ ಅಣ್ಣನಿಗೆ ಒಂದ್ ಫೋನ್ ಮಾಡಬೇಕು ಅಂತ ಹೇಳಿ ನನ್ನ ಮೊಬೈಲ್ ತಗೊಂಡು ಅಣ್ಣನಿಗೆ ಫೋನ್ ಮಾಡಿದಳು
ಅಣ್ಣ ರಿಸೀವ್ ಮಾಡಿದ ತಕ್ಷಣ ಮತ್ತು ಜೋರಾಗಿ ಅತ್ತು "ನನ್ನ ಫೋನ್ ಕದ್ದುಕೊಂಡ ಹೋದರು" ಅಂದಳು ಅದಕ್ಕೆ ಅಣ್ಣ "ಮೊಬೈಲ್ ಹೋದರೆ ಹೋಗಲಿ ನೀನು ಅಳಬೇಡ ಮನೆಗೆ ಬರುವುದಕ್ಕೆ ದುಡ್ಡು ಇದಿಯಾ ಅಂತ ಕೇಳಿದಾಗ ಇಲ್ಲ ದುಡ್ಡಿಲ್ಲ ಮೊಬೈಲ್ ಜೊತೆಗೆ ಮೆಟ್ರೋ ಕಾರ್ಡು ಸಹ ಹೋಗಿದೆ ಅಂದಳು ಅಳುತ್ತಾ. ಫೋನ್ ನನಗೆ ಕೊಡುವುದಕ್ಕೆ ಹೇಳಿದರು ಅವಳ ಅಣ್ಣ.
"ಹಲೋ ಸರ್ ಅವಳು ನನ್ನ ತಂಗಿ ಅವಳ ಮೊಬೈಲ್ ಹೋಗಿದೇ ಅಂತೆ ಪ್ಲೀಸ್ ಅವಳನ್ನು ವಿಜಯನಗರಕ್ಕೆ ಹೋಗುವ ಮೆಟ್ರೊ ರೈಲಿನಲ್ಲಿ ಕಳುಹಿಸಿಕೊಡಿ ನಿಮಗೆ ಗೂಗಲ್ ಪೇ ಮಾಡುತ್ತೇನೆ ಪ್ಲೀಸ್ ಇದೊಂದು ಸಹಾಯ ಮಾಡಿ ಮೊಬೈಲ್ ಹೋದ ಟೆನ್ಶನ್ ನಲ್ಲಿ ಅವಳು ಮನೆಗೆ ಬಂದಿಲ್ಲ ಅಂದರೆ ಕಷ್ಟ" ಅಂದರು. ತುಂಬಾ ಭಯಗೊಂಡಿದ್ದರು ಅವರ ಸ್ವರದಲ್ಲೇ ಗೊತ್ತಾಗುತ್ತಿತ್ತು ನಾನು "ಆಯ್ತು ಸರ್ ಭಯಪಡಬೇಡಿ ನಾನೇ ಅವರನ್ನು ಮೆಟ್ರೋದಲ್ಲಿ ಕಳುಹಿಸುತ್ತೇನೆ ಗೂಗಲ್ ಪೇ ಏನು ಮಾಡುವುದು ಬೇಡ" ಅಂತ ಹೇಳಿದೆ ಧನ್ಯವಾದಗಳು ನಿಮ್ಮಿಂದ ತುಂಬಾ ಉಪಕಾರವಾಯಿತು ಸರ್ ಅಂತ ಹೇಳಿ ತಂಗಿಗೆ ಫೋನ್ ಕೊಡುವುದಕ್ಕೆ ಹೇಳಿದರು..
"ಏನು ಟೆನ್ಶನ್ ಮಾಡ್ಕೋಬೇಡ ನಾಳೆ ಹೋಗಿ ಕಂಪ್ಲೇಂಟ್ ಮಾಡೋಣ ಈಗ ಸೀದಾ ಮನೆಗೆ ಬಾ ಅಂತ ಹೇಳಿದರು" ಅವಳು ಆಯ್ತು ಅಂತ ಹೇಳಿ ಫೋನ್ ನನಗೆ ಕೊಟ್ಟಳು.ನಾನು ಬನ್ನಿ ಮೆಟ್ರೋ ಸ್ಟೇಶನ್ ಗೆ ಹೋಗೋಣ ಅಂತ ಹೇಳಿದಾಗಲೂ ಕಣ್ಣೀರು ಹಾಕುತ್ತಿದ್ದಳು..
ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ ಅವಳಿಗೆ ವಿಜಯನಗರಕ್ಕೆ ಹೋಗುವ ಮೆಟ್ರೋ ಟೋಕನ್ ತೆಗೆದುಕೊಟ್ಟೆ ಅವಾಗ ಮಾತನಾಡಿದಳು ತುಂಬಾ ಥ್ಯಾಂಕ್ಸ್ ನಿಮಗೆ ಅಂದಳು.ಮನಸ್ಸಿಗೆ ಚೂರು ಖುಷಿ ಆಯಿತು ಅವಳು ಮಾತನಾಡಿದ್ದಕ್ಕೆ😜😜😜.
ಮೊಬೈಲ್ ನಲ್ಲಿ "ಮಹತ್ವವಾದ ಡಾಕ್ಯುಮೆಂಟ,ಬ್ಯಾಂಕ್ ಮಾಹಿತಿ ಏನಾದರೂ ಇತ್ತಾ ಅವಾಗಿಂದ ಅಳುತ್ತಿದ್ದೀರಿ ಅದಕ್ಕೆ ಕೇಳಿದೆ ತಪ್ಪು ತಿಳಿದುಕೊಳ್ಳಬೇಡಿ" ಅಂದೇ ಅದಕ್ಕವಳು "ಅದು ಯಾವುದು ಇಲ್ಲ ಮೊನ್ನೆ ಲಾಲಬಾಗ್ ನಲ್ಲಿ ಮಾಡಿದ ಫೋಟೋ ಶೂಟ್ ಫೋಟೋಸ್ ಮತ್ತೆ ನನ್ನ ನನ್ನ ಕಸಿನ್ ಮದುವೆಯಲ್ಲಿ ತೆಗೆದ ಸೆಲ್ಫೀ ಫೋಟೋಸ್ ಇತ್ತು ಅದಿಷ್ಟು ಫೋಟೋಸ್ ಗೂಗಲ್ ಡ್ರೈವ್ ಗೆ ಅಪ್ಲೋಡ್ ಮಾಡಿರಲಿಲ್ಲ. ಅವೆಲ್ಲಾ ಫೋಟೋ ಹೋಗಿದ್ದಕೆ ಬೇಜಾರು ಅಷ್ಟೇ ಮೊಬೈಲ್ ಹೋಗಿದ್ದಕ್ಕೆ ಅಲ್ಲ "ಅಂದಳು. ಅವಳ ಆ ಮಾತಿಗೆ ಅಳಬೇಕಾ ನಗಬೇಕೋ ಅಂತ ಗೊತ್ತಾಗಲಿಲ್ಲ ಒಂದು ಕ್ಷಣ.(ಮನಸ್ಸಿನಲ್ಲಿ ಈ ಹುಡುಗಿಯರನ್ನು ಅರ್ಥ ಮಾಡಿಕೊಳ್ಳುದು ದೇವರಿಗೆ ಸಹಾ ಆಗೊಲ್ಲ ಅಂತ ಕಾಣುತ್ತೆ😂😂😂) ಫೋಟೋಸ್ ಗಾಗಿ ಇಷ್ಟೋತ್ತು ಅಳುತ್ತಿದ್ದಳು ಅಂದಾಗ ಮೆಟ್ರೋ ಸ್ಟೇಷನ್ ಮೇಲಿಂದ ಕೆಳಗಡೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಅನಿಸಿಬಿಡ್ತು ನನಗೆ ಒಂದು ಸಲ😂😂😂😂..
ಲೇಟ್ ಆಯ್ತು ನೀವು ಜಾಗ್ರತೆ ಆಗಿ ಮನೆಗೆ ಹೋಗಿ ಮನೆಯಲ್ಲಿ ಅಣ್ಣ ಕಾಯುತ್ತಿದ್ದಾರೆ ಅಂತ ಹೇಳಿದಾಗ ಹಾ ಸರಿ ತುಂಬಾ ಥ್ಯಾಂಕ್ಸ್ ಸರ್ ಸಹಾಯ ಮಾಡಿದ್ದಕ್ಕೆ ಅಂತ ಹೇಳಿ ಹೋದಳು.ಅವಳ ಅಣ್ಣನಿಗೆ ಫೋನ್ ಮಾಡಿ ಹೇಳಿದೆ ನಿಮ್ಮ ತಂಗಿ ಮೆಟ್ರೋ ರೈಲ್ ಹತ್ತಿದ್ದಾಳೆ ಅಂತ ಅವರು ತುಂಬಾ ಖುಷಿಗೊಂಡು ಮತ್ತೆ ಮತ್ತೆ ಧನ್ಯವಾದಗಳು ಹೇಳಿದರು.ಹುಡುಗಿಗೆ ಸಹಾಯ ಮಾಡಿದೇ ಅನ್ನೋ ಖುಷಿ ಒಂದೆಡೆಯಾದರೆ ಭೈರಪ್ಪನವರ 8 ಪುಸ್ತಕ ಸಿಕ್ಕಿದಕ್ಕೆ ಜಾಸ್ತಿ ಖುಷಿ ಆಗಿತ್ತು.ಪುಸ್ತಕ ತೆಗೆದುಕೊಂಡು ಮನೆಗೆ ಬಂದಾಗ ಅವಳ ಅಣ್ಣ ಫೋನ್ ಮಾಡಿ ತಂಗಿ ಮನೆಗೆ ಬಂದಿದ್ದಾಳೆ ಅಂತ ಹೇಳಿದರು.
ಘಟನೆ ನಡೆದು ಸರಿಯಾಗಿ 10 ದಿನಕ್ಕೆ ನನ್ನ ಮೊಬೈಲ್ ಗೆ ಹೊಸ ನಂಬರಿನಿಂದ ವಾಟ್ಸಾಪ್ ಸಂದೇಶ ಬಂದಿತ್ತು.ಮೊಬೈಲ್ ನೋಡಿದೆ ಅದರಲ್ಲಿ
"ಹಾಯ್ ನಾನು
ಮೆಟ್ರೋ ಹುಡುಗಿ ಸ್ಮಿತಾ😍 ... ಅಂತಿತ್ತು. ಆ
ಸಂದೇಶ ನೋಡಿದಾಗ ಮನಸ್ಸಿನ ಮೂಲೆಯಲ್ಲಿ
"ಹೃದಯದಲ್ಲಿ ಇದೇನಿದು
ನದಿಯೊಂದು ಓಡಿದೆ..
ಹೃದಯದಲ್ಲಿ ಇದೇನಿದು
ನದಿಯೊಂದು ಓಡಿದೆ..
ಕಲಕಲನೆ ಕಲರವ ಕೇಳಿ
ಹೊಸಬಯಕೆಯ ಹೂವು ಅರಳಿ..
ಜೊತೆಯಲ್ಲಿ ಪ್ರೇಮ ಗೀತೆಹಾಡುವಾಸೆ ಈಗ...."
ಈ ಹಾಡು ಕೇಳುತ್ತಿತ್ತು🙈.
✍️ಎನ್.ಆರ್.ಕೆ.ನೇರಳಕಟ್ಟೆ.
Subscribe to:
Post Comments (Atom)
No comments:
Post a Comment