ಪ್ರೀತಿ ಎನ್ನುವ ಮಾಯಾಪ್ರಪಂಚದ ಬಗ್ಗೆ ನಾನು ತಲೆಕೆಡಿಸಿಕೊಂಡಿರಲಿಲ್ಲ."ಪ್ರವಾಲಿಕಳನ್ನು" ನೋಡುವ ತನಕ.ಕ್ರಿಕೇಟ್ ಮತ್ತು ಓದುಬರಹದ ಬಗ್ಗೆ ಮಾತ್ರ ತಲೆಕೆಡಿಸಿಕೊಂಡಿದ್ದೆ.ಯಾವಾಗ ಅವಳನ್ನು ನೋಡಿದೆನೋ ಆಗಲೇ ನನ್ನ ಹೃದಯದಲ್ಲಿ ಪ್ರೀತಿಯ ಘಂಟೆ ಮೊಳಗಿತು. ಅವಳನ್ನು ನೋಡುವ ಮುಂಚೆ ಮೊದಲ ನೋಟದಲ್ಲಿ ಪ್ರೀತಿ ಹುಟ್ಟುತ್ತದೆ ಅಂತ ಯಾರಾದರೂ ಹೇಳಿದರೆ ನಗಾಡುತ್ತಿದ್ದೆ.ಅದು ಸುಳ್ಳೆಂದು ಆ ತರಹ ಆಗಲ್ಲಿಕ್ಕೆ ಸಾಧ್ಯವೇ ಇಲ್ಲ ಅಂತ ವಾದಿಸುತ್ತಿದ್ದೆ.ಆದರೆ ನನ್ನ ಜೀವನದಲ್ಲಿಯೇ ನಡೆದ ಮೇಲೆ ಮೊದಲ ನೋಟದಲ್ಲಿ ಪ್ರೀತಿ ಹುಟ್ಟುತ್ತದೆ ಅನ್ನುವ ಮಾತು ಸತ್ಯ ಅನಿಸುತಿದೆ ನನಗೆ.
ಫೇಸಬುಕ್ ನಲ್ಲಿ ಪರಿಚಯವಾದ ಮೈಸೂರಿನ ಪ್ರಸಿದ್ಧ ಡಾಕ್ಟರ್ ರಂಜಿತ್ ಅವರ ೨೦ನೇ ವರ್ಷದ ಮದುವೆ ವಾರ್ಷಿಕೋತ್ಸವಕ್ಕೆ ಕರೆದಿದ್ದರು.ಆ ಅದ್ಧೂರಿ ಸಮಾರಂಭಕ್ಕೆ ನನ್ನ ಮತ್ತು ಅವರ ಎಲ್ಲಾ ಫೇಸಬುಕ್ ಗೆಳೆಯ ಗೆಳತಿಯರು ಬಂದಿದ್ದರು.ಅದರಲ್ಲಿ ನನ್ನ ಗೆಳತಿಯೊಬ್ಬರು ತನ್ನೊಂದಿಗೆ ತಂಗಿಯನ್ನು ಕರೆದುಕೊಂಡು ಬಂದಿದ್ದರು.ಅವಳೇ "ಪ್ರವಾಲಿಕಾ".ಅಲ್ಲೇ ಮೊದಲಬಾರಿಗೆ ಅವಳನ್ನು ನೋಡಿದ್ದು.ಅವಳ ಅಕ್ಕ ನನ್ನನ್ನು ಅವಳಿಗೆ "ವಿನಯ್" ಅಂತ ಅಂದು ನನಗೆ ಇವಳು ನನ್ನ ತಂಗಿ "ಪ್ರವಾಲಿಕಾ" ಎಂದು ಪರಿಚಯಿಸಿದಾಗ ಅವಳು ನಗುತ್ತ "ಹಲೋ" ಅಂದಳು.ಅಬ್ಬ! ಎಂತಹ ನಗು! ಅಷ್ಟು ಮುದ್ದಾಗಿತ್ತು ಅವಳ ನಗು! ಎಲ್ಲರೂ ಜೋಕ್ ಮಾಡುತ್ತಾ,ನಗುತ್ತಾ ಮಾತನಾಡುತ್ತಿದ್ದರೆ ನಾವಿಬ್ಬರು ಮಾತ್ರ ಸುಮ್ಮನೆ ಕುಳಿತುಕೊಂಡಿದ್ದೆವು.ಆಕೆ ನನ್ನ ಹಾಗೆಯೇ ಹೆಚ್ಚು ಮಾತನಾಡುವವಳಲ್ಲ ಅಂತ ನನಗಾಗಲೇ ತಿಳಿಯಿತು.ಊಟಕ್ಕೆ ನನ್ನ ಪಕ್ಕದಲ್ಲಿ ಕುಳಿತುಕೊಂಡಿದ್ದಳು ತುಂಬಾ ಖುಷಿಯಾಗಿತ್ತು ನನಗೆ.ಅದು ನನ್ನ ಪಾಲಿಗೆ ಮರೆಯಲಾಗದ ಕ್ಷಣ.
ಊಟ ಮುಗಿದ ತಕ್ಷಣ ನನ್ನ ಗೆಳೆಯ-ಗೆಳತಿಯರು ಏನಾದರೂ ಆಟ ಆಡೋಣ ಎಂದರು.ಎಲ್ಲರೂ ಕೇರ್ಂ,ಚೆಸ್,ಕಾರ್ಡ್ಸ್ ಆಡಲ್ಲಿಕ್ಕೆ ಶುರುಮಾಡಿದರು. ಆದರೆ ಪ್ರವಾಲಿಕ ಮಾತ್ರ ಆಡಲ್ಲಿಕೆ ಬರದೇ ಕೇರ್ಂ ಆಡುತ್ತಿದ್ದ ನನ್ನ ಎದುರಿಗೆ ಕುರ್ಚಿಯ ಮೇಲೆ ಕುಳಿತಳು.ಎಲ್ಲರೂ ಆಟವಾಡುತ್ತಿದ್ದರು.ಎಲ್ಲರ ಕಣ್ಣು ತಪ್ಪಿಸಿ ನಾನು ಪ್ರವಾಲಿಕಳನ್ನು ನೋಡುತ್ತಿದ್ದೆ.ಆ ವೇಳೆಗೆ ಅವಳು ಧರಿಸಿದ್ದ ಚೂಡಿಧಾರ್ ವೇಲ್ ಕುತ್ತಿಗೆಯಿಂದ ಜಾರಿ ಕೆಳಗೆ ಬಂದಿತ್ತು.ಅದು ಅವಳಿಗೆ ತಿಳಿಯದೆ ಹೋಗಿತ್ತು.ವೇಲ್ ಜಾರಿ ಹೋಗಿದ್ದರಿಂದ ಅವಳ ಸೌಂದರ್ಯ ಕಾಣುತ್ತಿತ್ತು.ಹುಡುಗರೆಲ್ಲ ತುಂಬಿರುವ ಜಾಗದಲ್ಲಿ ಹೀಗೆ ಇದ್ದರೆ ಕಷ್ಟ ಅಂತ ಅನಿಸಿತ್ತು.ಆದರೆ ಅದನ್ನು ಅವಳಿಗೆ ಹೇಗೆ ಹೇಳುವುದು ಎಂದು ಒದ್ದಾಡುತ್ತಿದ್ದೆ.ಅಷ್ಟರಲ್ಲಿ ನನ್ನ ಮನದ ಮಾತು ಕೇಳಿಸಿತೆಂಬಂತೆ ಅವಳೇ ನನ್ನೆಡೆಗೆ ದೃಷ್ಟಿ ಹರಿಸಿದಳು.ನಾನು ತಕ್ಷಣ ಟೀ-ಶರ್ಟ್ ಅನ್ನು ಎದೆಯಿಂದ ಸ್ವಲ್ಪ ಮೇಲೆ ಎಳೆದುಕೊಂಡೆ.ಅದನ್ನು ನೋಡಿದ ಅವಳು ತಕ್ಷಣವೇ ಅರಿವಾಗಿ ಬಟ್ಟೆ ಸರಿಮಾಡಿಕೊಂಡಳು.
ಬಟ್ಟೆ ಸರಿ ಮಾಡಲ್ಲಿಕ್ಕೆ ಏನೋ ಹೇಳಿಬಿಟ್ಟೆ ಆದರೆ ಆನಂತರ ಭಯ ಆಗಲ್ಲಿಕ್ಕೆ ಶುರುವಾಯಿತು.ನನ್ನ ವರ್ತನೆಯಿಂದ ಅವಳು ತಪ್ಪು ತಿಳಿದಳೇನೋ,ಅವಳು ಅಕ್ಕನ ಬಳಿ ನಿನ್ನ ಗೆಳೆಯ ಸರಿ ಇಲ್ಲ ಅಂತ ಹೇಳಿದರೆ...ಅನ್ನೋ ಅಳುಕುಂಟಾಯಿತು.ಪರಿಚಯವಿಲ್ಲದ ಹುಡುಗಿಗೆ ಅದು ಮೊದಲಬಾರಿಗೆ ಭೇಟಿಯಾದ ಹುಡುಗಿಗೆ ಆ ರೀತಿ ಹೇಳುವ ಧೈರ್ಯ ಅದೆಲ್ಲಿಂದ ಬಂತೋ ಇಲ್ಲಿಯ ತನಕ ತಿಳಿದಿಲ್ಲ.
ಕೇರ್ಂ ಆಟ ಮುಗಿಯಿತು ನಾನು ಅವಳ ಪಕ್ಕದ ಕುರ್ಚಿಯಲ್ಲಿ ಕುಳಿತುಕೊಂಡೆ.ಆಗ ಅವಳು ನನಗೆ ಮಾತ್ರ ಕೇಳಿಸುವ ಹಾಗೇ ಹಗುರವಾಗಿ "ತುಂಬಾ ಥ್ಯಾಂಕ್ಸ್" ಅಂದಳು.ನನಗೆ ಎಷ್ಟು ಖುಷಿಯಾಯಿತು ಅಂದರೆ ಸ್ವರ್ಗ ಸಿಕ್ಕಷ್ಟೇ ಖುಷಿಯಾಗಿತ್ತು.ಯಾಕೆಂದರೆ ಅವಳಿಗೆ ನಾನು ಹೇಳಿದ್ದು ಅರ್ಥವಾಗಿತ್ತು.ತಪ್ಪು ತಿಳಿದುಕೊಂಡಿರಲಿಲ್ಲ ಅವಳು ಅದೇ ನನಗೆ ತುಂಬಾ ಖುಷಿಯಾಗಿತ್ತು.ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿತ್ತು ಅವಳಿಗೆ ಆ ಘಟನೆಯ ನಂತರ.ನನಗೂ ಸಹ ಅವಳೇ ನನ್ನ ಪ್ರೀತಿಯ ಹುಡುಗಿ ಅನಿಸೋದಕ್ಕೆ ಶುರುವಾಯಿತು.ಮೊದಲನೋಟಕ್ಕೆ ಮರೆಯಲಾರದಂತೆ ಇಷ್ಟಪಟ್ಟಿದ್ದೆ "ಪ್ರವಾಲಿಕಳನ್ನು".
ಆದರೆ ನನ್ನ ಪ್ರೀತಿಯ ವಿಷಯ ಹೇಳಿರಲಿಲ್ಲ.ಅದಾದ ನಂತರ ಅವಳು ಪತ್ತೆಯಿರಲಿಲ್ಲ.ಮನಸ್ಸು ಅವಳನ್ನು ನೋಡಬೇಕೆಂದು ಕಾತರಿಸಿದರೂ
ಕೂಡಾ ಮನದ ಭಾವನೆಗಳನ್ನು ಅಂಕೆಯಲ್ಲಿಟ್ಟು ಬಂಧಿಸಿದೆ.ಅವಳ ಅಕ್ಕನಿಗೆ ಪೋನ್ ಮಾಡಿ ವಿಚಾರಿಸಬೇಕು ಎನಿಸುತ್ತಾದರೂ,ಇದರಿಂದ ಅವಳಿಗೆ ತೊಂದರೆ ಆದರೆ ಅಂತ ನನ್ನನ್ನು ನಿಯಂತ್ರಿಸಿಕೊಂಡಿದ್ದೆ.ಅವಳ ಅಕ್ಕನಿಗೆ ಹೀಗೆ ಒಮ್ಮೆ ಪೋನ್ ಮಾಡಿದಾಗ ಮತ್ತೆ ಸಿಕ್ಕಿದಳು ನನ್ನ "ಪ್ರವಾಲಿಕ"
ದಿನ ಕಳೆದಂತೆ ಅವಳನ್ನು ಬಿಟ್ಟು ಅಸಾಧ್ಯ ಎನಿಸಿದಾಗ ಅವಳಲ್ಲಿ ಪ್ರೀತಿಯನ್ನು ಭಿನ್ನವಿಸಿಕೊಂಡು ಒಪ್ಪಿಗೆ ಪಡೆದು,ಅನಂತರ ನಾನೇ ಮುಂದೆ ನಿಂತು ನನ್ನ ಮತ್ತು ಅವಳ ಮನೆಯವರ ಒಪ್ಪಿಗೆಯನ್ನೂ ಪಡೆದೆ.ಒಂದೇ ಜಾತಿಯಾಗಿದ್ದರಿಂದ ಅವಳ ಮನೆಯವರೂ ಸಮ್ಮತಿ ಸೂಚಿಸಿದರು.ಮೊದಲ ನೋಟಕ್ಕೆ ಇಷ್ಟಪಟ್ಟು ಪ್ರಪೋಸ್ ಮಾಡದೇ,ಜಾಸ್ತಿ ಮಾತನಾಡದೇ,ಎಲ್ಲಿಯೂ ತಿರುಗಾಡದೇ ಒಂದೇ ವರ್ಷದಲ್ಲಿ ನಾನು-ಪ್ರವಾಲಿಕ ಮದುವೆಯಾದವು.ಮದುವೆಯ ಮುಂಚಿನ ಪ್ರೀತಿಯನ್ನು ಮದುವೆಯಾದ ಮೇಲೆ ನನಗೆ ಕೊಡುತ್ತಿದ್ದಾಳೆ.ಹಾಗಂತ ಎಲ್ಲರಿಗೂ ಮೊದಲ ನೋಟದಲ್ಲಿಯೇ ಈ ರೀತಿ ಹುಡುಗಿ ಸಿಗುತ್ತಾಳೆಂದು ಹೇಳುವುದು ಕಷ್ಟ.ಆ ವಿಷಯದಲ್ಲಿ ನಾನು ತುಂಬಾ ಅದೃಷ್ಟವಂತ.ನನ್ನ ಮನ ಮೆಚ್ಚಿದ ಹುಡುಗಿಯೇ ಈಗ ನನ್ನ ಮನ ಬೆಳಗುವ ದೇವತೆಯಾಗಿದ್ದಾಳೆ.............
(ಈ ಕಥೆಯಲ್ಲಿನ ವ್ಯಕ್ತಿಗಳು, ಹೆಸರುಗಳು ಕಾಲ್ಪನಿಕವಾಗಿದ್ದು.ಯಾವುದೇ ವ್ಯಕ್ತಿಗೆ ಸಂಬಂಧಪಟ್ಟಿಲ್ಲ.ಇದೊಂದು ನನ್ನ ಕಲ್ಪನೆಯ ಕಥೆ)
ಎನ್.ಆರ್.ಕೆ.ನೇರಳಕಟ್ಟೆ