Friday, 28 December 2012

"ಕೀಳುಮಾತಿನ ಪ್ರಚಾರಪ್ರಿಯರು"



ಇತ್ತೀಚಿಗೆ ನಮ್ಮ ಸಮಾಜದ ಕೆಲವು ಗಣ್ಯವ್ಯಕ್ತಿಗಳು,ರಾಜಕೀಯದವರು,ರಾಜಕೀಯದವರ ಮಕ್ಕಳುಗಳು ಮತ್ತು ಸಾಹಿತಿಗಳು ಪುಕ್ಕಟೆ ಪ್ರಚಾರ ಗಿಟ್ಟಿಸಲು ಒಂದು ದಾರಿ ಕಂಡುಕೊಂಡಿದ್ದಾರೆ ಅದು ಏನೆಂದರೆ ನಮ್ಮ ಹಿಂದಿನ ಮಹಾನ್ ಪುರುಷರ, ಕವಿಗಳು, ಕಾದಂಬರಿಕಾರರು ಬರೆದ ಬರಹಗಳ ಬಗ್ಗೆ,ಅವರ ವಿಚಾರಗಳ ಬಗ್ಗೆ,ಜೀವನದ ಶೈಲಿಯ ಬಗ್ಗೆ,ಸಾರ್ವಜನಿಕರ ಹೋರಾಟದ ಬಗ್ಗೆ, ಸಾರ್ವಜನಿಕವಾಗಿ ವಿವಾದಾತ್ಮಕ ಹೇಳಿಕೆ ನೀಡುವುದು.ದೇಶಕ್ಕೆ ಏನಾದರೂ ಕೊಡುಗೆ ನೀಡಿ ಅಥವಾ ಒಳ್ಳೆಯ ಕೆಲಸ,ಬಡಬಗ್ಗರಿಗೆ ಸಹಾಯ ಮಾಡುವುದರ ಮೂಲಕ ಹೆಸರು ಗಳಿಸುವುದು ಬಿಟ್ಟು ಬೇಡದ ವಿಷಯಗಳ ಬಗ್ಗೆ ಕೆಟ್ಟದಾಗಿ ಮಾತನಾಡಿ ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ.ನಮ್ಮ ರಾಷ್ಟ್ರಪತಿಯವರಿಗೆ ಒಬ್ಬ ಮೂರ್ಖ ಮಗನಿರುವ ವಿಷಯ ಇಲ್ಲಿಯ ತನಕ ಹೆಚ್ಚಿನವರಿಗೆ ತಿಳಿದಿಲ್ಲ.ಅವನು ದಿಲ್ಲಿಯಲ್ಲಿ ನಡೆಸುತ್ತಿರುವ ಜನರ ಪ್ರಾಮಾಣಿಕ ಹೋರಾಟದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಅಗ್ಗದ ಪ್ರಚಾರ ಗಿಟ್ಟಿಸಿಕೊಂಡ.ಹಣ ಖರ್ಚುಮಾಡದೇ ಪುಕ್ಕಟೆಯಾಗಿ ಸಿಕ್ಕ ಪ್ರಚಾರ ಅದು.ಮುಂದಿನ ಚುನಾವಣೆಗೆ ನಿಂತರೆ ಅವನಿಗೆ ಪ್ರಚಾರದ ಅಗತ್ಯವಿಲ್ಲ ಅನಿಸುತ್ತಿದೆ.ರಾಷ್ಟ್ರಪತಿ ಮಗ ಒಬ್ಬನೇ ಅಲ್ಲ ಪ್ರತಿಯೊಬ್ಬರು ಇದೇ ದಾರಿ ಹಿಡಿದಿದ್ದಾರೆ ಅದೇ ದುರಂತದ ಸಂಗತಿ. ಟೀಕೆ ಮಾಡುವವರಿಗೆ ಗೊತ್ತಿರುತ್ತದೆ ನಾವು ಮಾಡುತ್ತಿರುವುದು ತಪ್ಪು ಅಂತ ಆದರೂ ತಮ್ಮ ಇರುವಿಕೆಯನ್ನು ತೋರಿಸಲು, ನಾವು ಭಾರತದಲ್ಲಿ ಜೀವಂತ ಇದ್ದೇವೆ ಅಂತ ತೋರಿಸಲ್ಲಿಕ್ಕೆ ತರ ಮಾಡುತ್ತಿದ್ದಾರೆ ಅದಕ್ಕೆ ಸರಿಯಾಗಿ ನಮ್ಮ ಮಾಧ್ಯಮಗಳು ಸುಮ್ಮನೆ ಪ್ರಚಾರ ಕೊಡುವುದರಿಂದ ತರ ಮಾಡುವವರು ಸಂಖ್ಯೆ ದಿನದಿನ ಹೆಚ್ಚಾಗುತ್ತಿದೆ.ಇಂತಹ ವಿಷಯಗಳಿಗೆ ಮೊದಲು ಕಡಿವಾಣ ಹಾಕಬೇಕು ಇಲ್ಲದಿದ್ದರೆ ಇದು ಅಂಟುರೋಗದಂತೆ ಬೆಳೆಯುದರಲ್ಲಿ ಅನುಮಾನವೇ ಇಲ್ಲಾ ಅನಿಸುತಿದೆ. ಸಾರ್ವಜನಿಕವಾಗಿ ವಿವಾದಾತ್ಮಕ ಹೇಳಿಕೆ ನೀಡುವವರಿಗೆ ಜೈಲಿಗೆ ಹಾಕಿ ಕಠಿಣ ಶಿಕ್ಷೆ ವಿಧಿಸಬೇಕು ಅವಾಗಾಲಾದರೂ ತರ ಹೇಳಿಕೆ ಕೊಡುವುದು ಕಮ್ಮಿ ಆಗಬಹುದು ಅಷ್ಟೆ..ಮತ್ತೆ ಮಾಧ್ಯಮದವರು ಇಂತ ವಿಷಯಗಳಿಗೆ ಹೆಚ್ಚಿನ ಮಹತ್ವ ಕೊಡದೇ ಇದ್ದರೆ ಅವಾಗ ಕೂಡ ಸಮಸ್ಯೆ ಸ್ವಲ್ಪ ಕಮ್ಮಿ ಆಗಬಹುದು.ನಮ್ಮ ಜನ ಪ್ರಚಾರಕೋಸ್ಕರ ಏನು ಬೇಕಾದರೂ ಮಾಡುತ್ತಾರೆ ಅನ್ನುವುದಕ್ಕೆ ಇದೇ ಸಾಕ್ಷಿ....
            -ಎನ್.ಆರ್.ಕೆ.ನೇರಳಕಟ್ಟೆ..

No comments:

Post a Comment