ಕೆಲಸ ಮತ್ತು ಕ್ರಿಕೇಟ್ ಆಡುವ ಭರದಲ್ಲಿ ನನ್ನ ಹೃದಯವನ್ನು ಸರಿಯಾಗಿ ವಿಚಾರಿಸಿಕೊಳ್ಳಲೇ
ಇಲ್ಲ.ಯಾಕೋ ಹೃದಯ ತುಂಬಾ ಮೌನವಾಗಿ ಬಿಟ್ಟಿದೆ.ಕಾರಣವೇ ತಿಳಿದಿಲ್ಲ.ಅದಕೋಸ್ಕರವೇ ಈ ದಿನ
ಸಮಯ ತೆಗೆದುಕೊಂಡು ಹೃದಯವನ್ನು ಮಾತನಾಡಿಸಿದೆ. ಹಲೋ ಏನಾಯ್ತು ತುಂಬಾ ಮೌನವಾಗಿರುತ್ತಿಯ
ನೀನು ಇತ್ತಿಚೆಗೆ ಅಂದಾಗ ಹೃದಯ ಬೇಸರದಲ್ಲಿ ಹೇಳಿತು ನನ್ನ ಜೊತೆ ಮಾತನಾಡಲು ಯಾರು
ಇಲ್ಲ, ನನ್ನೊಡಲಿನ ಪಿಸುಮಾತನ್ನು ಹೇಳಲು ಇನ್ನೊಂದು ಹೃದಯ ಬೇಕು ಅಂದಿತು.ಅದಕ್ಕೆ ನಾನು
ಹೇಳಿದೆ.ನಾನೇ ಇದ್ದಿನಲ್ಲಾ ನನ್ನ ಹತ್ತಿರವೇ ಹೇಳು ನಿನ್ನ ಪಿಸುಮಾತುಗಳನ್ನು.ಹೃದಯ
ಸಿಟ್ಟಿನಲ್ಲಿ ಹೇಳಿತು ನೀನು ಯಾವಾಗ ನನ್ನ ಮಾತು ಕೇಳಿದ್ದಿಯಾ ಯಾವಾಗ ನೋಡಿದರೂ
ಕ್ರಿಕೇಟ್ ಆಡುತ್ತಿಯಾ ಅದನ್ನು ಬಿಟ್ಟರೆ ಫೇಸಬುಕ್,ವಾಟ್ಸಫ್ ನಲ್ಲಿ ಬ್ಯುಸಿ ಇರುತ್ತಿಯಾ
ನನ್ನ ಮಾತು ಕೇಳಲ್ಲಿಕೆ ನಿನಗೆ ಸಮಯವಾದರೂ ಎಲ್ಲಿದೆ ಅಂತ ವ್ಯಂಗ್ಯ ಮಾಡಿತು.ನನಗೂ ಹೌದು
ಅನಿಸಿತು ಹೃದಯದ ಮಾತು.ಆಯ್ತು ಮಾರಾಯ ಈಗ ಬೇಕು ಅಂದ ಕೂಡಲೇ ನಿನಗೆ ಎಲ್ಲಿಂದ ತರುವುದು
ಇನ್ನೊಂದು ಹೃದಯವನ್ನು ಅಂದೆ.ಅದಕ್ಕೆ ಹೃದಯ ನೀನು ಹತ್ತನೇಯ ತರಗತಿ ಪಾಸಾದಾಗಲೇ ನಿನಗೆ
"ಹಾಸಿನಿ"ಯನ್ನು ತೋರಿಸಿದೆ.ನೀನು ಮಾತ್ರ ಅವಳನ್ನು ನೋಡದೇ ಆಟ ಆಡಿಕೊಂಡೆ ಕಾಲ
ಕಳೆದೆ.ಪಿಯುಸಿಯಲ್ಲಿ ಸಿಕ್ಕ ಮುದ್ದು ಮುಖದ ಹುಡುಗಿ ಹಾಸಿನಿ ನೋಡಿದ ಕೂಡಲೇ ಮನಸ್ಸಿಗೆ
ಇಷ್ಟವಾಗಿದ್ದಳು.ಪ್ರೀತಿಸಬೇಕು ಅಂದುಕೊಂಡಿದ್ದೆ ಆದರೆ ಕಾಲೇಜಿಗೆ ಸರಿಯಾಗಿ ಬರದೇ
ಆಡುತ್ತಿದ್ದ ನನಗೆ ಅವಳು ನೆನಪಾಗಲೇ ಇಲ್ಲ.ಈಗ ಮತ್ತೆ ನೆನಪಾದಳು ಸ್ವಲ್ಪ ಫೀಲ್ ಆಯಿತು
ಅಷ್ಟೇ.ಹಳೆಯದನ್ನು ಆಲೋಚಿಸುವುದರಿಂದ ಪ್ರಯೋಜನವಿಲ್ಲ ಅಂತ ಗೊತ್ತು ಅದಕ್ಕೆ ಅದನ್ನು
ಅಲ್ಲೆ ಮರೆತು ನಾ ಹೇಳಿದೆ ಹೃದಯಕ್ಕೆ ನಾನು ಇರುವ ಚಂದಕ್ಕೆ ನನ್ನನ್ನು ನೋಡುವುದೇ ಕಷ್ಟ
ಅಂಥದರಲ್ಲಿ ಯಾರು ಹೃದಯ ಕೊಡುತ್ತಾರೆ ಮಾರಾಯ ಅಂದೆ.ಹೃದಯ ಯಾವತ್ತು ಅಂದವನ್ನು
ಬಯಸುವುದಿಲ್ಲ ತಿಳಿದುಕೊ. ನೀನೊಮ್ಮೆ ಹೃದಯಕ್ಕಾಗಿ ಪ್ರಯತ್ನಿಸು ಸಿಕ್ಕೆ ಸಿಗುತ್ತದೆ
ಅನ್ನುವ ನಂಬಿಕೆಯಿದೆ ನನಗೆ ಅಂದಿತು ಹೃದಯ.ಹೃದಯಕ್ಕೆ ಇರುವ ನಂಬಿಕೆ ನನಗೆ
ಇಲ್ಲವಾಗಿತ್ತು.ಆದರೂ ಹೃದಯದ ಖುಷಿಗಾಗಿ ಪ್ರಯತ್ನಿಸುತ್ತೇನೆ ಅಂದಾಗ.ಹೃದಯ ನಗುತ್ತ ನೀನು
ಏನು ಪ್ರಯೋಜನಕ್ಕೆ ಬಾರದವ ಇಂದಿನ ಹುಡುಗರು ಎಂಟನೇಯ ತರಗತಿಯಿಂದ ಹೃದಯದ ಹುಡುಕಾಟ
ಶುರುಮಾಡಿ ಮದುವೆಯಾಗುವುದರೊಳಗೆ ತಮ್ಮ ಹೃದಯಕ್ಕೆ ಹತ್ತಾರು ಹುಡುಗಿಯರ ಹೃದಯವನ್ನು
ಪರಿಚಯಿಸುತ್ತಾರೆ ಅಂಥದರಲ್ಲಿ ನೀನು ಇದ್ದೀಯಾ ೨೫ ವರ್ಷ ಆಯಿತು ಇಲ್ಲಿ ತನಕ
ನನಗೆ ಒಂದು ಹೃದಯವನ್ನು ಪರಿಚಯಿಸಲಿಲ್ಲ ಕೇವಲ ಕ್ರಿಕೇಟ್ ಆಡಿ ಕಾಲ ಕಳೆದೆ ಎಂದು ಕುಹಕವಾಡಿತು.ಅದರ ಮಾತಿಗೆ ನನ್ನಲ್ಲಿ ಉತ್ತರ ಇರಲಿಲ್ಲ.
ಹೃದಯದ ಮಾತು ಕೇಳಿದ ಮೇಲೆ ಅದಕೋಸ್ಕರ ಇನ್ನೊಂದು ಹೃದಯದ ಹುಡುಕಾಟ ಶುರುಮಾಡಿದೆ.ಬೇಕು ಅಂದಾಗ ದೊರೆಯಲು ಹೃದಯ ಅನ್ನುವುದು ಅಂಗಡಿಯಲ್ಲಿ ಮಾರಾಟ ಮಾಡುವ ವಸ್ತುವೇ..ಸಿಗಲಿಲ್ಲ ಅನ್ನುವುದಕ್ಕಿಂತ ಪ್ರಯತ್ನ ಮಾಡಲಿಲ್ಲ ಅನ್ನುವುದು ಸರಿ ಅನಿಸುತ್ತದೆ.ಕ್ರಿಕೇಟ್ ಆಡಿ ಬರುವಾಗ ರಸ್ತೆಯಲ್ಲಿ ಹುಡುಗಿಯರನ್ನು ನೋಡಿದಾಗ ಮಾತ್ರ ಹೃದಯದ ಮಾತು ನೆನಪಾಗುತ್ತಿತ್ತು.ಆಮೇಲೆ ಮತ್ತೆ ಮರೆತುಹೋಗುತ್ತಿತ್ತು.ಹೃದಯ ಮತ್ತೆ ಕೊರಗಲು ಶುರುಮಾಡಿತು.ನಾ ಹೇಳಿದೆ ನನ್ನ ಪ್ರಯತ್ನವೆಲ್ಲಾ ಮಾಡಿದೆ ಹೃದಯ ಸಿಗಲಿಲ್ಲ ಅದಕ್ಕೆ ನಾನು ಏನು ಮಾಡುವುದು ಮಾರಾಯ ಅಂದೆ.ಅದಕ್ಕೆ ಹೃದಯ ಗಂಟೆಗಟ್ಟಲೇ ಫೇಸಬುಕನಲ್ಲಿ ಇರುತ್ತಿಯಾ ಅಲ್ಲಾದರೂ ಪ್ರಯತ್ನಿಸು ಅಂದಿತು.ನನಗೂ ಸರಿ ಅನಿಸಿತು.
ಹೃದಯದ ಕಾಟ ತಾಳಲಾರದೇ ಫೇಸಬುಕ್ ನಲ್ಲಿ ಇರುವುದರಲ್ಲಿ ನೋಡಲ್ಲಿಕೆ ಸ್ವಲ್ಪ ಚಂದ ಇರುವ ಪೋಟೋ ಹಾಕಿದೆ.ಅಲ್ಲಿಯ ತನಕ ನನ್ನನ್ನು ಯಾರು ನೋಡಿರಲಿಲ್ಲ ಅಂತೂ ನನ್ನ ಮುಖದ ದರ್ಶನ ಫೇಸಬುಕ್ ಗೆಳೆಯರಿಗೆ ಆಯಿತು.ನಾ ಹಾಕಿದ ನನ್ನ ಪೋಟೊಗೆ ಸುಮಾರು ೨೦ ಲೈಕ್ ಮತ್ತು ೧೦ ಕಮೆಂಟ್ಸ್ ಬಂದಿತು.ನೋಡಿ ಸ್ವಲ್ಪ ಖುಷಿಯಾಯಿತು.ಯಾರು ಯಾರು ಲೈಕ್ ಮಾಡಿದ್ದು ಅಂತ ನೋಡಿದಾಗ ಬರೇ ಹುಡುಗರು ಒಂದೇ ಒಂದು ಹುಡುಗಿ ನನ್ನ ಪೋಟೊ ಲೈಕ್ ಮಾಡಿರಲಿಲ್ಲ ತುಂಬಾ ಬೇಸರವಾಯಿತು.ನನ್ನ ಹತ್ತಿರ ಹೃದಯ ಹುಡುಕಲ್ಲಿಕ್ಕೆ ಆಗದ ಕೆಲಸ ಅಂತ ಗೊತ್ತಾಯಿತು.ಅದಕ್ಕೆ ಹೃದಯದ ಹತ್ತಿರ ಸಾರಿ ಕೇಳಿ ನನ್ನ ಹತ್ತಿರ ನಿನಗೆ ಹೃದಯ ಹುಡುಕುವುದಕ್ಕೆ ಆಗುವುದಿಲ್ಲ ಮಾರಾಯ ಅಂದಾಗ.ಹೃದಯ ನಗುತ್ತ ಅದು ನನಗೆ ಮೊದಲೇ ಗೊತ್ತಿತ್ತು ನಿನ್ನ ಹತ್ತಿರ ಆಗದ ಕೆಲಸವೆಂದು ಆದರೂ ನಿನ್ನನ್ನು ಪರೀಕ್ಷಿಸುವ ಅಂತ ಮಾಡಿದೆ ಅದರಲ್ಲಿ ನೀನು ಫೇಲಾದೆ.ನೀನು ಹೃದಯದ ಹುಡುಕುವುದು ಬಿಟ್ಟು ಮದುವೆಯಾಗು. ನಿನ್ನ ಹೆಂಡತಿಯಾಗಿ ಬರುವ ಹುಡುಗಿಯ ಹೃದಯದ ಜೊತೆ ನನ್ನ ಇಷ್ಟು ವರ್ಷದ ತನ್ನೊಡಲಿನ ಪಿಸುಮಾತುಗಳನ್ನು ಅವಳಲ್ಲಿ ಹೇಳಿ ಸಂಭ್ರಮಿಸುತ್ತೇನೆ ಅಂದಾಗ ನನಗೆ ತುಂಬಾ ಖುಷಿ ಆಯಿತು ಅಂತೂ ಹೃದಯದ ಕಾಟ ತಪ್ಪಿತು ಅಂತ..
ಆದರೂ ಮನ್ನಸ್ಸಿನಲ್ಲಿ ಒಂದು ನೋವು ಕಾಡುತ್ತಿತ್ತು.ನಾನು ಅಷ್ಟೋಂದು ಕುರೂಪಿನಾ..? ಒಂದೇ ಒಂದು ಹುಡುಗಿ ನನ್ನ ಪೋಟೊವನ್ನು ಲೈಕ್ ಮಾಡಿರಲಿಲ್ಲ.ಅದಕ್ಕೆ ಕಾರಣವೇನು ಅಂತ ಚಿಂತಿಸುತ್ತಿದ್ದೆ.ಕನ್ನಡಿಯ ಮುಂದೆ ನಿಂತು ನನ್ನನ್ನು ನೋಡಿದೆ ನೋಡಲ್ಲಿಕ್ಕೆ ಅಷ್ಟೊಂದು ಚಂದವಿಲ್ಲ ನಿಜ ಆದರೆ ನೋಡದೇ ಇರುವಷ್ಟು ಕೆಟ್ಟದಾಗಿರಲಿಲ್ಲ ನನ್ನ ಮುಖ .ಯಾಕೆ ಹೀಗಾಯ್ತು ಅಂತ ಫೇಸಬುಕನಲ್ಲಿ ಮತ್ತೆ ಹುಡುಕಿದೆ.ಗೆಳೆಯರು ಯಾರು ಯಾರು ಅಂತ ಚೆಕ್ ಮಾಡಿದಾಗ ಆದ ಸಂತೋಷಕ್ಕೆ ಪಾರವೇ ಇರಲಿಲ್ಲ.ಯಾಕೆಂದರೆ ನನ್ನ ಫ್ರೆಂಡ್ಸ್ ಲಿಸ್ಟನಲ್ಲಿ ಒಂದೇ ಒಂದು ಹುಡುಗಿ ಇರಲಿಲ್ಲ.ಯಾವ ಹುಡುಗಿಯು ನನ್ನ ಪೋಟೊ ನೋಡಿಲ್ಲ ಅದಕ್ಕೆ ಯಾರು ಲೈಕ್ ಮಾಡಿಲ್ಲ ಅಂತ ನನಗೆ ನಾನೇ ಸಮಾಧಾನ ಮಾಡಿಕೊಂಡು ಖುಷಿಪಟ್ಟೆ...ಮತ್ತೆ ಕ್ರಿಕೇಟ್ ಆಡಲ್ಲಿಕ್ಕೆ ಹೊರಟೆ ನೆಮ್ಮದಿಯಿಂದ.....
ಎನ್.ಆರ್.ಕೆ.ನೇರಳಕಟ್ಟೆ....

No comments:
Post a Comment