ತಂದೆ-ತಾಯಿ ಯಾರೆಂದು ಗೊತ್ತಿಲ್ಲ
ರಸ್ತೆಯ ಬದಿಯಲ್ಲಿ ನನ್ನ ಎಸೆದು ಹೋಗಿದ್ದರು
ಯಾರು ಕೂಡ ಹನಿ ನೀರು ಕೊಡಲಿಲ್ಲ
ವರುಣದೇವ, ಭೂಮಿತಾಯಿಯ ಕೃಪೆಯಿಂದ
ನಾನು ಭಯದಿಂದಲೇ ಬೆಳೆದೆ
ವರ್ಷಗಳ ನಂತರ ವಯಸ್ಸಿಗೆ ಬಂದ
ತರುಣಿಯ ತರಹ ಮುದ್ದುಮುದ್ದಾಗಿ ಬೆಳೆದೆ
ಎಲ್ಲರ ಕಣ್ಣು ನನ್ನನ್ನೇ ನೋಡುವ ಹಾಗೇ...
ಊರಿನಲ್ಲಿ ಮದುವೆ ಆಗುತ್ತೆ ಅಂದರೆ ಎಲ್ಲಾ
ಬಂದು ನನ್ನ ಜೀವ ಕಿತ್ತು ತಿನ್ನುತ್ತಿದ್ದರು
ಆ ಕ್ಷಣದಲ್ಲಿ ಆಗುವ ನೋವು ಯಾರಿಗೂ ಬೇಡ...
ವರ್ಷಗಳು ಉರುಳಿತು
ತಾಯಿಯಾಗುವ ಸಂಭ್ರಮ ನನಗೆ
ಹೆರಿಗೆಯ ನೋವು ಅಷ್ಟಾಗಿರಲಿಲ್ಲ ಆದರೆ
ಮಕ್ಕಳು ಚಿಕ್ಕವರಿದಿದ್ದಾಗಲೇ
ಊರಿನವರು ಕಲ್ಲುಹೊಡೆದು, ಬಡಿಗೆಯಿಂದ ಬಡಿದು
ನನ್ನಿಂದ ಮಕ್ಕಳನ್ನು
ಕಿತ್ತುಕೊಳ್ಳಲ್ಲಿಕ್ಕೆ ಶುರು ಮಾಡಿದರು
ಇಷ್ಟು ಅನ್ಯಾಯ ನಡೆದರು ಯಾರಿಗೂ
ನನ್ನ ನೋವು ಕೇಳಿಸಲಿಲ್ಲ
ಬಾಯಿ ಬಿಟ್ಟು ಹೇಳುವ ಅಂದರೆ ನಾನು
ಮೂಕಳಾಗಿದ್ದೆ..
ಮದುವೆಯ ಮನೆ ಅಲಂಕಾರಕ್ಕೆ,
ಬಳಲಿ ಬಂದವರಿಗೆ ನೆರಳು,
ಹಸಿವೆ ಆದವರಿಗೆ ಹಣ್ಣು ನೀಡಿದೆ
ನಾನು ಕೊಟ್ಟಿದು ಸಾಲದೆಂದು
ನನ್ನ ಬುಡಕ್ಕೆ ಕೊಡಲಿ ಏಟು ಹಾಕುತ್ತಿದ್ದಾರೆ
ನಾನು ಮಾಡಿದ ಅನ್ಯಾಯವಾದರೂ ಏನು
ಅಂತ ತಿಳಿಯದೇ ಸಾಯುತ್ತಿದ್ದೀನಿ...
ತನಗಾಗಿ ಸ್ವಾರ್ಥದ ಜೀವನ ನಡೆಸಬೇಡ
ಪರರ ಹಿತಕ್ಕಾಗಿ ಬದುಕು ಎಂದು ಹೇಳಿರುವ
ಬುದ್ದಿಜೀವಿ ಮಾನವರು
ಪರರ ಹಿತಕ್ಕಾಗಿ ಬದುಕಿ ಬೆಳೆಯುವ ನನ್ನಂಥ
ಮರಗಳನ್ನು ಕಾರಣ ಹೇಳದೇ ಕೊಲ್ಲುತ್ತಿದ್ದಾರೆ
ನಾವು ಅಷ್ಟೊಂದು ನೋವು ಅನುಭವಿಸಿ
ನಮ್ಮ ಜೀವನ ಹಾಳುಮಾಡಿಕೊಂಡು
ಇನ್ನೊಬ್ಬರನ್ನು ಖುಷಿಪಡಿಸುವ ಈ ಮರಗಳ
ಜೀವನ ನನಗೆ ಬೇಡ ದೇವರೆ
ಆದಷ್ಟು ಬೇಗ ಪಾಪಿ ಮನುಷ್ಯರ
ಕೈಯಿಂದ ಮುಕ್ತಿ ಕರುಣಿಸು ಎಂದು
ಕಣ್ಣೀರು ಹಾಕುತ್ತಿತ್ತು ಮಾವಿನ ಮರ...
ಎನ್.ಆರ್.ಕೆ.ನೇರಳಕಟ್ಟೆ..
ರಸ್ತೆಯ ಬದಿಯಲ್ಲಿ ನನ್ನ ಎಸೆದು ಹೋಗಿದ್ದರು
ಯಾರು ಕೂಡ ಹನಿ ನೀರು ಕೊಡಲಿಲ್ಲ
ವರುಣದೇವ, ಭೂಮಿತಾಯಿಯ ಕೃಪೆಯಿಂದ
ನಾನು ಭಯದಿಂದಲೇ ಬೆಳೆದೆ
ವರ್ಷಗಳ ನಂತರ ವಯಸ್ಸಿಗೆ ಬಂದ
ತರುಣಿಯ ತರಹ ಮುದ್ದುಮುದ್ದಾಗಿ ಬೆಳೆದೆ
ಎಲ್ಲರ ಕಣ್ಣು ನನ್ನನ್ನೇ ನೋಡುವ ಹಾಗೇ...
ಊರಿನಲ್ಲಿ ಮದುವೆ ಆಗುತ್ತೆ ಅಂದರೆ ಎಲ್ಲಾ
ಬಂದು ನನ್ನ ಜೀವ ಕಿತ್ತು ತಿನ್ನುತ್ತಿದ್ದರು
ಆ ಕ್ಷಣದಲ್ಲಿ ಆಗುವ ನೋವು ಯಾರಿಗೂ ಬೇಡ...
ವರ್ಷಗಳು ಉರುಳಿತು
ತಾಯಿಯಾಗುವ ಸಂಭ್ರಮ ನನಗೆ
ಹೆರಿಗೆಯ ನೋವು ಅಷ್ಟಾಗಿರಲಿಲ್ಲ ಆದರೆ
ಮಕ್ಕಳು ಚಿಕ್ಕವರಿದಿದ್ದಾಗಲೇ
ಊರಿನವರು ಕಲ್ಲುಹೊಡೆದು, ಬಡಿಗೆಯಿಂದ ಬಡಿದು
ನನ್ನಿಂದ ಮಕ್ಕಳನ್ನು
ಕಿತ್ತುಕೊಳ್ಳಲ್ಲಿಕ್ಕೆ ಶುರು ಮಾಡಿದರು
ಇಷ್ಟು ಅನ್ಯಾಯ ನಡೆದರು ಯಾರಿಗೂ
ನನ್ನ ನೋವು ಕೇಳಿಸಲಿಲ್ಲ
ಬಾಯಿ ಬಿಟ್ಟು ಹೇಳುವ ಅಂದರೆ ನಾನು
ಮೂಕಳಾಗಿದ್ದೆ..
ಮದುವೆಯ ಮನೆ ಅಲಂಕಾರಕ್ಕೆ,
ಬಳಲಿ ಬಂದವರಿಗೆ ನೆರಳು,
ಹಸಿವೆ ಆದವರಿಗೆ ಹಣ್ಣು ನೀಡಿದೆ
ನಾನು ಕೊಟ್ಟಿದು ಸಾಲದೆಂದು
ನನ್ನ ಬುಡಕ್ಕೆ ಕೊಡಲಿ ಏಟು ಹಾಕುತ್ತಿದ್ದಾರೆ
ನಾನು ಮಾಡಿದ ಅನ್ಯಾಯವಾದರೂ ಏನು
ಅಂತ ತಿಳಿಯದೇ ಸಾಯುತ್ತಿದ್ದೀನಿ...
ತನಗಾಗಿ ಸ್ವಾರ್ಥದ ಜೀವನ ನಡೆಸಬೇಡ
ಪರರ ಹಿತಕ್ಕಾಗಿ ಬದುಕು ಎಂದು ಹೇಳಿರುವ
ಬುದ್ದಿಜೀವಿ ಮಾನವರು
ಪರರ ಹಿತಕ್ಕಾಗಿ ಬದುಕಿ ಬೆಳೆಯುವ ನನ್ನಂಥ
ಮರಗಳನ್ನು ಕಾರಣ ಹೇಳದೇ ಕೊಲ್ಲುತ್ತಿದ್ದಾರೆ
ನಾವು ಅಷ್ಟೊಂದು ನೋವು ಅನುಭವಿಸಿ
ನಮ್ಮ ಜೀವನ ಹಾಳುಮಾಡಿಕೊಂಡು
ಇನ್ನೊಬ್ಬರನ್ನು ಖುಷಿಪಡಿಸುವ ಈ ಮರಗಳ
ಜೀವನ ನನಗೆ ಬೇಡ ದೇವರೆ
ಆದಷ್ಟು ಬೇಗ ಪಾಪಿ ಮನುಷ್ಯರ
ಕೈಯಿಂದ ಮುಕ್ತಿ ಕರುಣಿಸು ಎಂದು
ಕಣ್ಣೀರು ಹಾಕುತ್ತಿತ್ತು ಮಾವಿನ ಮರ...
ಎನ್.ಆರ್.ಕೆ.ನೇರಳಕಟ್ಟೆ..
superb :)
ReplyDeleteThanks Hegdrey....
ReplyDeleteNice....
ReplyDelete