Thursday, 20 December 2012

"ಹಳೆಯ ಮಧುರ ನೆನಪುಗಳು"

ಗೆಳೆಯ ಹರ್ಷಿತ್ ಅವರ ಮನೆಯಲ್ಲಿ ರಾತ್ರಿ ಪಾರ್ಟಿ ಇದ್ದಿತ್ತು ಅದನ್ನು ಮುಗಿಸಿಕೊಂಡು ಬೆಳಿಗ್ಗೆ ಮನೆಗೆ ಹೋಗಲು ಬೈಯಪ್ಪನಹಳ್ಳಿಯಿಂದ ಮೆಟ್ರೋ ರೈಲಿನಲ್ಲಿ ಎಮ್.ಜಿ.ರಸ್ತೆಗೆ ಹೊರಟ್ಟಿದ್ದೆ.ಇಂದಿರಾನಗರ ಸ್ಟೇಷನ್ ನಲ್ಲಿ ೪ ವರ್ಷದ ಮಗು ಮತ್ತೆ ಗಂಡನ ಜೊತೆ ಮಾತಾಡುತ್ತಿದ್ದ ಹೆಂಗಸನ್ನು ನೋಡಿದಾಗ ಎಲ್ಲೋ ನೋಡಿದ ನೆನಪು ಅಂತ ಮನಸ್ಸು ಹೇಳುತ್ತಿತ್ತು.ಎಷ್ಟೇ ನೆನಪಿಸಿಕೊಂಡರೂ ನೆನಪಾಗಲಿಲ್ಲ ಅದಕ್ಕೆ ಸುಮ್ಮನಾದೆ.ಅಷ್ಟರಲ್ಲಿ ಆ ಚಿಕ್ಕ ಹುಡುಗ ಮೆಟ್ರೋ ರೈಲಿನ ಒಳಗಡೆ ಬಂದುಬಿಟ್ಟಿದ್ದ ಅವರಿಬ್ಬರು ಮಾತನಾಡುತ್ತಿದ್ದರು ಅವರಿಗೆ ತಿಳಿಯಲೇ ಇಲ್ಲ ಅವಾಗಲೇ ಬಾಗಿಲು ಮುಚ್ಚಿಕೊಂಡಾಗ ಹುಡುಗ ಕೂಗಲ್ಲಿಕ್ಕೆ ಶುರು ಮಾಡಿದ.ಹೊರಗಿನಿಂದ ಅಪ್ಪ-ಅಮ್ಮ ಕೂಡ ನೋಡಿ ಕೂಗುತ್ತ ಓಡಿಬಂದರೂ ರೈಲ್ ನಿಲ್ಲದೆ ಹೊರಟುಬಿಟ್ಟಿತು.
ಅಳುತ್ತಿದ್ದ ಹುಡುಗನ ಕರೆದು ಅಳಬೇಡ ನಾನು ನಿಮ್ಮನೆಗೆ ಕರೆದುಕೊಂಡು ಹೋಗಿಬಿಡುತ್ತೇನೆ ಭಯ ಪಡಬೇಡ ಅಂದಾಗ ಸ್ವಲ್ಪ ಸುಮ್ಮನಾದ.ಅಪ್ಪನ ಪೋನ್ ನಂಬರ್ ಗೊತ್ತಿದಿಯಾ ಅಂತ ಕೇಳಿದೆ.ಅದಕ್ಕೆ ಆ ಹುಡುಗ ಹೌದು ಅಂತ ಕೊಟ್ಟ ನಾನು ಆ ನಂಬರಿಗೆ ಪೋನ್ ಮಾಡಿ ಅವನ ತಂದೆಗೆ ಭಯಪಡಬೇಡಿ ಎಮ್.ಜಿ.ರಸ್ತೆಯಲ್ಲಿ ಕಾಯುತ್ತಿರುತ್ತೇನೆ ಅಂದಾಗ ಅವರು ತುಂಬಾ ಧನ್ಯವಾದಗಳು ಅಂದರು.
ನಿನ್ನ ಹೆಸರೇನು ಅಂದಾಗ ಹುಡುಗ "ಪ್ರಸನ್ನ" ಅಂದಾಗ ಆಶ್ಚರ್ಯವಾಯಿತು.ಯಾಕೆಂದರೆ ನನ್ನ ಹೆಸರು ಪ್ರಸನ್ನ ಆಗಿತ್ತು.ತಂದೆಯ ಹೆಸರು ಕೇಳಿದಾಗ ಸುರೇಶ ಅಮ್ಮನ ಹೆಸರು ಸ್ಪಂದನಾ ಅಂದಾಗ ನನ್ನ ಬಾಲ್ಯದ ಗೆಳತಿ ಸ್ಪಂದನಾಳ ನೆನಪಾಗಿತ್ತು.ಅವಳಾಗಿರಲ್ಲಿಕ್ಕೆ ಸಾಧ್ಯವಿಲ್ಲ ಅಂದುಕೊಂಡೆ.ಎಲ್ಲಿ ಮನೆ,ಶಾಲೆ ಅಪ್ಪ-ಅಮ್ಮ ಏನು ಮಾಡುತ್ತಾರೆ ಅಂತ ಕೇಳಿದೆ.ಎಲ್ಲದಕ್ಕೂ ತುಂಬಾ ಚೂಟಿಯಾಗಿ ಉತ್ತರಿಸುತ್ತಿದ್ದ.ಅವನ ಜೊತೆ ಮಾತನಾಡುವುದಕ್ಕೆ ಒಂಥರಾ ಖುಷಿಯಾಗುತ್ತಿತ್ತು.ಎಮ್.ಜಿ.ರೋಡ್ ಸ್ಟೇಷನನಲ್ಲಿ ಪ್ರಸನ್ನನ ತಂದೆ-ತಾಯಿಗಾಗಿ ಕಾದು ಕುಳಿತೆ.
ರೈಲ್ ಬಂತು ಅದರಲ್ಲಿ ಸುರೇಶ್-ಸ್ಪಂದನ ದಂಪತಿ ಇಳಿದು ಬರುವಾಗ ಅವಳನ್ನು ನೋಡಿದಾಗ ಮನಸ್ಸು ಸ್ಪಂದನಾ ಅಂತ ಗಟ್ಟಿಯಾಗಿ ಕೂಗುತ್ತಿತ್ತು.ಅಳುತ್ತ ಬಂದು ಮಗುವನ್ನು ಜೋರಾಗಿ ತಬ್ಬಿಕೊಂಡರು.ಅವಾಗ ಕುತ್ತಿಗೆಯ ಹತ್ತಿರವಿದ್ದ ಆಪರೇಶನ್ ಕಲೆ ಮತ್ತೆ ಎರಡು ಕೈನಲ್ಲಿ ಆರು ಬೆರಳು ಇದೆ ನೋಡಿದ ಕೂಡಲೇ ತಿಳಿದುಹೋಯಿತು ಇವಳು ನನ್ನ ಬಾಲ್ಯದ ಗೆಳತಿ ಅಂತ.ಸ್ಪಂದನಾ ಕೇಳಿದಳು ನಿಮ್ಮನ್ನು ಮೊದಲು ಎಲ್ಲೊ ನೋಡಿದ ನೆನಪು ಯಾವ ಊರು? ನಿಮ್ಮದು ನಿಮ್ಮ ಹೆಸರೇನು ಅಂತ ಕೇಳಿದಳು.ನಾನು ಬೇಕು ಅಂತ ಸುಳ್ಳು ಹೇಳಿದೆ ಊರು ಶೃಂಗೇರಿ ಹೆಸರು ಸುಭಾಷ್ ಅಂದೆ.ಅದಕ್ಕವಳು ಸುಮ್ಮನಾದಳು.ಸುರೇಶ್ ಹೇಳಿದರು ನಿಮ್ಮಿಂದ ತುಂಬಾ ಉಪಕಾರವಾಯಿತು ಒಂದು ಸಲ ನಮ್ಮನೆಗೆ ಬನ್ನಿ ಅಂದಾಗ ನಾನು ಸರಿ ಸಮಯ ಸಿಕ್ಕಾಗ ಒಮ್ಮೆ ಬರುತ್ತೇನೆ ಅಂತ ಹೇಳಿ ಹೊರಟುಬಂದೆ "ಪ್ರಸನ್ನ ನನಗೆ ಟಾಟಾ ಮಾಡುತ್ತಿದ್ದ.
ಹದಿನೈದು ವರ್ಷಗಳ ನಂತರ ಮೊದಲಬಾರಿಗೆ ಸ್ಪಂದನಾಳನ್ನು ನೋಡಿದ ಖುಷಿ ಒಂದುಕಡೆ ಆದರೆ ನಾನೇ ಪ್ರಸನ್ನ ಅಂತ ಅವಳಿಗೆ ಹೇಳದ ಪರಿಸ್ಥಿತಿಯಿಂದ ತುಂಬಾ ಬೇಸರವಾಗಿತ್ತು.ಜೀವನದಲ್ಲಿ ಅವಳನ್ನು ಮತ್ತೆ ನೋಡುತ್ತಿನಿ ಅಂತ ಕನಸು ಸಹ ಕಂಡಿರಲಿಲ್ಲ ಆದರೆ ಮತ್ತೆ ಸಿಕ್ಕಳು.ನನ್ನ ಮರೆತು ಬಿಟ್ಟು ಹೋಗಿದ್ದಾಳೆಂದು ತಿಳಿದುಕೊಂಡಿದ್ದೆ.ಆದರೆ ಅವಳಿನ್ನು ನನ್ನ ಮರೆತಿಲ್ಲ ಅನ್ನುವುದಕ್ಕೆ ತನ್ನ ಮಗನಿಗೆ ನನ್ನ ಹೆಸರಿಟ್ಟಿದ್ದಾಳೆ ಅನ್ನುವುದೇ ಸಾಕ್ಷಿ.ಮೊದಲ ಪ್ರೀತಿಗೆ ಸಾವಿಲ್ಲ ಅಂತಾರೆ ಅದು ನಿಜ ಅನಿಸುತಿದೆ.
ಪ್ರೀತಿಯೋ ಆಕರ್ಷಣೆಯೋ ತಿಳಿಯದ ವಯಸ್ಸಿನಲ್ಲಿ ಅಂದರೆ ಒಂಭತ್ತನೆಯ ತರಗತಿಯಲ್ಲಿ ಓದುತ್ತಿರುವಾಗ ಏಳನೆಯ ತರಗತಿಯ ಹುಡುಗಿ ಸ್ಪಂದನಾಳನ್ನು ನೋಡಬೇಕೆನ್ನುವ ಒಂಥರಾ ಹುಚ್ಚು ಆಸೆ.ಅದಕ್ಕಾಗಿ ಕ್ರೀಕೆಟ್ ಆಡುವ ನೆಪದಲ್ಲಿ ಅವರ ಮನೆಗೆ ಹೋಗಿ ಅವಳನ್ನು ನೋಡುತ್ತಿದ್ದೆ.ಅವಳು ಸಹ ನೋಡುತ್ತಿದ್ದಳು ಆದರೆ ಮಾತನಾಡುತ್ತಿರಲಿಲ್ಲ.ಆದರೆ ಅದು ಪ್ರೀತಿ ಅಂತ ನಾನು ಹೇಳುವುದಿಲ್ಲ.೨ ವರ್ಷಗಳಲ್ಲಿ ಬರೆ ನಾನು ಅವಳನ್ನು ನೋಡುತ್ತಿದೆ ಅವಳು ನನ್ನನು ನೋಡುತ್ತಿದ್ದಳು.ನಾನು ನನ್ನ ಪ್ರೀತಿಯ ವಿಷಯ ಅವಳಿಗೆ ಹೇಳಲಿಲ್ಲ ಅವಳು ಹೇಳಲಿಲ್ಲ.ಹೈಸ್ಕೂಲ್ ರಜೆಯ ಸಮಯದಲ್ಲಿ ಅಜ್ಜಿಯ ಮನೆಗೆ ಹೋಗಿದ್ದೆ.ಆ ಸಮಯದಲ್ಲಿ ಅವಳ ತಂದೆಗೆ ಮಡಿಕೇರಿಗೆ ಟ್ರಾನ್ಸಫರ್ ಆಗಿತ್ತು.ನಾನು ವಾಪಸು ಬರುವುದರೊಳಗೆ ಎಲ್ಲರೂ ಮಡಿಕೇರಿಗೆ ಹೋಗಿಬಿಟ್ಟಿದ್ದರು.ಅಷ್ಟೆ ಅದೇ ಕೊನೆಯ ಸಾರಿ ಮತ್ತೆ ಅವಳು ನನಗೆ ಸಿಗಲೇ ಇಲ್ಲ.ಇಂದು ಮತ್ತೆ ಸಿಕ್ಕಿದ್ದಾಳೆ ಗಂಡ ಮತ್ತು ಮಗುವಿನ ಜೊತೆ.
ನಾನೇ ಪ್ರಸನ್ನ ಅಂತ ಹೇಳಿದರೆ ಅವಳ ನೆಮ್ಮದಿ ಸಂಸಾರ ಹಾಳಾಗುವ ಸಾಧ್ಯತೆ ಇದೆ ಅಂದುಕೊಂಡು ಮನಸ್ಸನ್ನು ಗಟ್ಟಿಮಾಡಿಕೊಂಡು ಅವಳನ್ನು ಮತ್ತೆ ಭೇಟಿಯಾಗಲ್ಲಿಕ್ಕೆ ಹೋಗಲಿಲ್ಲ.ಈಗವಳು ಬೇರೆಯವರ ಹೆಂಡತಿ ಅವಳ ಬಗ್ಗೆ ಆಲೋಚಿಸುವುದು ತಪ್ಪು ಅಂತ ಮನಸ್ಸು ಹೇಳಿತು ಅದಕ್ಕೆ ಅವಳ ಪ್ರೀತಿ,ಬಾಲ್ಯದ ಹಳೆಯ ನೆನಪುಗಳನ್ನು ಮರೆಯುತ್ತ ಮನೆ ಕಡೆ ಹೊರಟೆ...

6 comments:

  1. ತುಂಬಾ ಭಾವನಾತ್ಮಕವಾಗಿದೆ ಸುಪರ್ಬ್ , ಕೀಪ್ ವ್ರೈಟಿಂಗ್ ಬೆಸ್ಟ್ ಆಫ್ ಲಕ್

    ReplyDelete
    Replies
    1. ಎನ್ ಆರ್ ಕೆ ರೇ, ನಿಮ್ಮ ಕಲ್ಪನೆ ಅದ್ಭುತ. ಹೀಗೆ ಒಂದೊಂದಾಗಿ ಬರುತ್ತಿರಲಿ, ಬೆಸ್ಟ್ ಆಫ್ ಲಕ್ ...

      Delete
  2. wow super nimma kalpanegala story really awesome raj liked it :) all the best keep writting like this .........

    ReplyDelete
  3. Laik Itt NRK yare...Niroopane innu chenda maadi....Nice....

    ReplyDelete
  4. ತುಂಬಾ ಧನ್ಯವಾದಗಳು ಅಶೋಕಣ್ಣ..
    ಕಥೆ ನಿರೂಪಣೆಯ ಬಗ್ಗೆ ಏನು ಗೊತ್ತಿಲ್ಲ ನನಗೆ.ಮನಸ್ಸಿಗೆ ಹೇಗೆ ಬರುತ್ತದೊ ಹಾಗೇ ಬರೆದಿದ್ದೀನಿ.ಮುಂದಿನ ಸಲ ಬರೆಯುವಾಗ ನಿರೂಪಣೆಯ ಬಗ್ಗೆ ಪ್ರಯತ್ನ ಪಡುತ್ತೇನೆ ಅಶೋಕಣ್ಣ....

    ReplyDelete